ಕಾಸರಗೋಡು: ಮಾದಕವಸ್ತು ಮಾತ್ರೆಗಳ ಸಹಿತ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಕಾಸರಗೋಡಿನ ಕಾಞಂಗಾಡ್ ಎಂಬಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಪುದಿಯಂಗಡಿ ನಿವಾಸಿ ಪಿ.ಪಿರೋಜ್(34) ಎಂದು ಗುರುತಿಸಲಾಗಿದೆ.

ಆರೋಪಿಯಿ೦ದ ಪೊಲೀಸರು 7.965 ಗ್ರಾಂ ಟ್ರಾಮಾಡೋಲ್ ಮಾತ್ರೆಗಳು, 22/296 ಗ್ರಾಂ ನಿಟ್ರಾಸೇಪಂ ಮಾತ್ರೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





