Breaking
22 Mar 2026, Sun

ಬಂಟ್ವಾಳ: ಜಿಲ್ಲಾಮಟ್ಟದ ಬಾಕ್ಸಿಂಗ್ ನಲ್ಲಿ ಬೆನಝೀರ್ ಗೆ ಚಿನ್ನದ ಪದಕ

ಬಂಟ್ವಾಳ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮಂಗಳೂರು ಇದರ ಆಶ್ರಯದಲ್ಲಿ ಸಂತ ಜೋಸೆಫರ ಪದವಿ ಪೂರ್ವ ಕಾಲೇಜು ಬಜ್ಪೆ ಇದರ ಸಹಕಾರದೊಂದಿಗೆ ನ. 17ರಂದು ನಡೆದ ಪದವಿ ಪೂರ್ವ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಕಲ್ಲಡ್ಕ ಶ್ರೀ ರಾಮ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬೆನಝೀರ್ ಲಿಂಗ್ ದೋದ್ ಬಾಕ್ಸಿಂಗ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಇವರು ರಾಜೇಶ್ ಬ್ರಹ್ಮರಕೂಟ್ಲು ಅವರಿಂದ ಮಾರ್ಷಲ್ ಆರ್ಟ್ ತರಬೇತಿ ಪಡೆಯುತ್ತಿದ್ದಾರೆ.

ರಾಜೇಶ್ ಬ್ರಹ್ಮರಕೂಟ್ಲು ಅವರು ನೆತ್ತರಕೆರೆ ಸರಕಾರಿ ಶಾಲೆಯಲ್ಲಿ ಕರಾಟೆ, ಜೂಡೋ, ಕಲರಿ, ಸಿಲಂಬಂ, ಬಾಕ್ಸಿಂಗ್, ಸ್ಕೇಟಿಂಗ್ ಮೊದಲಾದ ಮಾರ್ಷಲ್ ಆರ್ಟ್ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *