Breaking
12 Aug 2026, Wed

ಭಟ್ಕಳದಲ್ಲಿ ಆಯತಪ್ಪಿ ನೀರಿಗೆ ಬಿದ್ದು ಮೀನುಗಾರ ಸಾವು

ಭಟ್ಕಳ : ಆಯತಪ್ಪಿ ನೀರಿಗೆ ಬಿದ್ದು ಮೀನುಗಾರನೋರ್ವ ಸಾವನಪ್ಪಿರುವ ಘಟನೆ ಭಟ್ಕಳದ ಮಾವಿನಕುರ್ವೆ ಬಂದರ್ ನಲ್ಲಿ ನ.14 ರಂದು ನಡೆದಿದೆ.

ಶ್ರೀಧರ್ ಪರಮೇಶ್ವರ್ ಖಾರ್ವಿ ಮೃತಪಟ್ಟ ದುರ್ದೈವಿ.

ಇವರು ಮೀನುಗಾರಿಕೆಗಾಗಿ ಮಾವಿನಕುರ್ವೆ ಬಂದರ್ ನಿಂದ ಸುಮಾರು 15 ಕಿ.ಮೀ ಸಮುದ್ರಕ್ಕೆ ಹೋಗಿದ್ದರು, ಆದರೆ ಮೀನುಗಾರಿಕಾ ಬಲೆಗಳನ್ನು ಎಳೆಯುವಾಗ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಶ್ರೀಧರ್ ಪರಮೇಶ್ವರ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *