ದಾವಣಗೆರೆ: ಬೈಕ್ ತಡೆದು ಹಲ್ಲೆ ಮಾಡಿ ದರೋಡೆ ಮಾಡಿದ ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲೇ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಬಂಧಿತರನ್ನು ಹನುಮಂತ(24) , ಅಮಿತ್ (20) , ಅಜಿತ್(24) , ವಿಷ್ಣು ಆರ್, ಕಿರಣ (22) ಬಂಧಿತ ಆರೋಪಿಗಳು.

ಬಂಧಿತರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ 30.120 ನಗದು ಮತ್ತು ಕೃತ್ಯಕ್ಕೆ ಬಳಸಿದ 1, 80, 000 ರೂಪಾಯಿ ಮೌಲ್ಯದ 2 ಬೈಕ್, 1 ಸ್ಕೂಟಿ ಹಾಗೂ 20,000 ರೂ. ಮೌಲ್ಯದ 5 ಮೊಬೈಲ್ ಗಳು ಹಾಗೂ ಅರ್ಧ ಚಂದ್ರಾಕಾರದ ಕಬ್ಬಿಣದ ಹಂಚ್ ಅನ್ನು ವಶಪಡಿಸಿಕೊಂಡು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಈ ಆರು ಮಂದಿ ಆರೋಪಿಗಳು ಹರಿಹರ ನಗರದ ವಿಜಯನಗರ ನಿವಾಸಿಯಾದ ಆದಿತ್ಯ ಎಂಬವರು ರಾತ್ರಿ 10 ಗಂಟೆಯವರೆಗೆ ಕೊಂಡಜ್ಜಿಯಲ್ಲಿರುವ ತಮ್ಮ ಬಾರ್ ಬಂದ್ ಮಾಡಿಕೊಂಡು ಬಾರ್ ನಿಂದ ಸಂಗ್ರಹವಾದ 67,000 ನಗದು ಹಣ ಹಾಗೂ ಬಾರ್ ನ ಕೀಯನ್ನು ಕ್ಯಾಶ್ ಬ್ಯಾಗ್ ನಲ್ಲಿ ಇರಿಸಿ ತಮ್ಮ ಹೊಂಡಾ ಆಕ್ಟಿವಾದಲ್ಲಿ ಹೊರಟಿದ್ದರು. ಡಿಕ್ಕಿಯಲ್ಲಿ ಹಣ ಮತ್ತು ಕೀಯನ್ನು ಇಟ್ಟುಕೊಂಡು ಪೊಲೀಸ್ ಪಬ್ಲಿಕ್ ಸ್ಕೂಲ್ ಮುಂಭಾಗ ಹೋಗುತ್ತಿರುವಾಗ 2 ಬೈಕ್ ಗಳಲ್ಲಿ 5 ಜನರು ಹಿಂಬಾಲಿಸಿಕೊಂಡು ಬಂದು ಯಾವುದೋ ಒಂದು ಕಬ್ಬಿಣದ ಆಯುಧದಿಂದ ಹಲ್ಲೆ ಮಾಡಿ ಕ್ಯಾಶ್ ಬ್ಯಾಗ್ ನಲ್ಲಿದ್ದ 67,000 ರೂಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದರು.
ಈ ಸಂಬಂಧ ಹರಿಹರ ಪೊಲೀಸ್ ಠಾಣೆಗೆ ಬಂದು ಆದಿತ್ಯ ದೂರು ನೀಡಿದ್ದು, ತನಿಖೆ ಇಳಿದ ಪೊಲೀಸರು ಆರೋಪಿಗಳನ್ನು ಹೆಡೆಮುರಿಕಟ್ಟಿ ಜೈಲಿಗಟ್ಟಿದ್ದಾರೆ.




