Breaking
27 Jun 2026, Sat

ಅಡಿಕೆ ಕ್ಯಾನ್ಸರ್ ಕಾರಕವಲ್ಲ ಅಂದ ವೈಜ್ಞಾನಿಕ ಸಂಶೋಧನಾ ವರದಿ

ಮಂಗಳೂರು: ಅಡಿಕೆ ಕ್ಯಾನ್ಸರ್ ಕಾರಕ ಅನ್ನುವ ಚರ್ಚೆಗೆ ಸಂಶೋಧನೆಯೊಂದು ಮಹತ್ವದ ವರದಿಯೊಂದನ್ನು ನೀಡಿದ್ದು ಕ್ಯಾನ್ಸರನ್ನು ತಡೆಯುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿರುವುದು ಅಡಿಕೆ ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಹೌದು ಒಂದೆಡೆ ಅಡಿಕೆ ಕ್ಯಾನ್ಸರ್ ಕಾರಕ ಎನ್ನುವ ಚರ್ಚೆ ನಡೆಯುತ್ತಿದ್ದರೆ, ಇದೆಲ್ಲಾ ಸುಳ್ಳು, ಅಡಿಕೆ ಕ್ಯಾನ್ಸರ್ ಪ್ರತಿಬಂಧಕ ಎನ್ನುವುದು ಸಾಬೀತಾಗಿದೆ. ಈ ಕುರಿತು ಯೆನೆಪೋಯ ವಿಶ್ವವಿದ್ಯಾಲಯದ ವೈಜ್ಞಾನಿಕ ಸಂಶೋಧನೆ ನಡೆಸಿ ಅಡಿಕೆಯ ಸಾರಗಳು ಕ್ಯಾನ್ಸರ್ ಕೋಶಗಳ ವೃದ್ಧಿ, ಚಲನೆ ಮತ್ತು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯುತ್ತವೆ ಹಾಗೂ ಇದು ಸಾಮಾನ್ಯ ಕೋಶಗಳಿಗೆ ಹಾನಿಯನ್ನುಂಟು ಮಾಡುವುದಿಲ್ಲ ಎನ್ನುವ ಮಹತ್ವಪೂರ್ಣ ಅಂಶವನ್ನು ಹೊರಗೆಡವಿದೆ.

ಸದ್ಯ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕ್ಯಾಂಪ್ಕೋದ ಕಿಶೋರ್ ಕುಮಾರ್ ಕೊಡ್ಗಿ ಪ್ರತಿಕ್ರಿಯೆ ನೀಡಿದ್ದು ಈ ಮಹತ್ವಪೂರ್ಣ ಫಲಿತಾಂಶದಿಂದ ಸಾಂಪ್ರದಾಯಿಕವಾಗಿ ಸಂಸ್ಕರಿಸಿದ ಅಡಿಕೆಯನ್ನು ಬಳಸಿದರೆ ಆರೋಗ್ಯದಾಯಕ ಲಾಭಗಳಿವೆ ಎನ್ನುವ ಜನಸಾಮಾನ್ಯರ ನಂಬಿಕೆಗೆ ಸಾಕ್ಷಾಧಾರ ಒದಗಿಸಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *