Breaking
23 Mar 2026, Mon

ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ದೈವಕ್ಕೆ ಅಪಚಾರ ಆಗಿಲ್ಲ- ರಿಷಬ್ ಶೆಟ್ಟಿ

ಮೈಸೂರು: ನಾನು ದೈವವನ್ನು ನಂಬುವವನು, ದೈವಕ್ಕೆ ಅಪಚಾರ ಆಗಿಲ್ಲ ಎಂದು ರಿಷಬ್ ಶೆಟ್ಟಿ ಮೈಸೂರಿನಲ್ಲಿ ಹೇಳಿದ್ದಾರೆ.

ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ದೈವಕ್ಕೆ ಅಪಚಾರ ಆಗಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರೆಯೆ ನೀಡಿದ ರಿಷಬ್ ಶೆಟ್ಟಿಯವರು ನಾನು ದೈವವನ್ನು ನಂಬುತ್ತೇನೆ. ಎಲ್ಲಿಯೂ ತಪ್ಪು ಆಗದಂತೆ ಸಿನಿಮಾ ಮಾಡಿದ್ದೇವೆ.

ಹಿರಿಯ ಮಾರ್ಗದರ್ಶನದಲ್ಲೇ ಸಿನಿಮಾ ಸಿದ್ಧವಾಗಿದೆ. ಹೇಳುವವರು ಹೇಳುತ್ತಾರೆ. ಅದು ಅವರ ದೃಷ್ಟಿಕೋನ. ನಾವು ಅಂದುಕೊಡಂತೆ ಸಿನಿಮಾ ತಂದಿದ್ದೇವೆ ಎಂದು ರಿಷಬ್ ಹೇಳಿದ್ದಾರೆ.

ನಾನು ಹೊಸಬ ಅಲ್ಲ. ಹಿಂದೆ ಕೂಡ ದೈವವನ್ನು ತೆರೆ ಮೇಲೆ ತಂದಿದ್ದರು, ಮುಂದೆ ಕೂಡ ತರುತ್ತಾರೆ. ತರುವವರು ಸರಿಯಾದ ರೀತಿಯಲ್ಲಿ ತರಲಿ ಎಂದಿದ್ದಾರೆ.

Leave a Reply

Your email address will not be published. Required fields are marked *