ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿಯವರ ವಿಚಾರದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಗಿರೀಶ್ ಮಟ್ಟಣ್ಣವರ್ ಅವರನ್ನು ಅ.18 ಕ್ಕೆ ವಿಚಾರಣೆಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಅ.11 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯ ಹೊರಗಡೆ ಗಿರೀಶ್ ಮಟ್ಟಣ್ಣವರ್ ಮಾಧ್ಯಮಗಳ ಜೊತೆ ಮಾತಾನಾಡುವಾಗ ತಿಮರೋಡಿ ಮಹೇಶ್ ಶೆಟ್ಟಿ ಎಲ್ಲೂ ಓಡಿಹೋಗಿಲ್ಲ ನಾನು ಈಗ ಉಜಿರೆಯಲ್ಲಿ ಮಾತಾನಾಡಿಕೊಂಡು ಬಂದೆ, ಪೊಲೀಸರಿಗೆ ಸಿಗದೇ ಇದ್ರೆ ನನ್ನ ತಪ್ಪಾ ಅಂತ ಹೇಳಿದ್ದರು.

ಅದರಂತೆ ಮಾಧ್ಯಮಗಳ ವರದಿ ಆಧರಿಸಿ ಬೆಳ್ತಂಗಡಿ ಪೊಲೀಸರು ಅ.15 ರಂದು ಬೆಂಗಳೂರು ಗಿರೀಶ್ ಮಟ್ಟಣ್ಣವರ್ ನಿವಾಸಕ್ಕೆ ತೆರಳಿ ವಿಚಾರಣೆಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.




