ಬಂಟ್ವಾಳ : ತಾಲೂಕಿನ ಪಣೋಲಿಬೈಲ್ ನಲ್ಲಿರುವ ಕಾರಣಿಕ ಕಲ್ಲುರ್ಟಿ ಕ್ಷೇತ್ರಕ್ಕೆ ಸ್ಯಾಂಡಲ್ ವುಡ್ ನಟ ಶಶಿಕುಮಾರ್ ಅವರು ಭೇಟಿ ನೀಡಿದರು.
ಈ ವೇಳೆ ದೈವದ ದರುಶನ ಪಡೆದ ಅವರು ಪ್ರಸಾದ ಸ್ವೀಕಾರ ಮಾಡಿದರು.

ಕಳೆದ 10 ವರ್ಷಗಳ ಹಿಂದೆ ಹರಕೆ ಹೊತ್ತಿದ್ದು ಅದನ್ನು ತೀರಿಸಲು ಅವರು ಕ್ಷೇತ್ರಕ್ಕೆ ಆಗಮಿಸಿದರು. ಮಾತ್ರವಲ್ಲ ಕ್ಷೇತ್ರದ ಕುರಿತು ಮೆಚ್ಚುಗೆಯ ನುಡಿಗಳನ್ನಾಡಿದರು.




