Breaking
26 Sep 2026, Sat

ಬಿಜೆಪಿ ಕಾರ್ಯಕರ್ತ ವಿನೋದ್ ರಾಜ್ ನಿಧನ

ಕಾಸರಗೋಡು: ಜಿಲ್ಲೆಯ ಪೈವಳಿಕೆ ಪಂಚಾಯತಿನ ಬಾಯಾರು ದಳಿಕುಕ್ಕು ನಿವಾಸಿ ಬಿಜೆಪಿ ಕಾರ್ಯಕರ್ತ ವಿನೋದ್ ರಾಜ್ (36) ನಿಧನರಾಗಿದ್ದಾರೆ.

ಅಸೌಖ್ಯ ನಿಮಿತ್ತ ಚಿಕಿತ್ಸೆಯಲ್ಲಿದ್ದ ಅವರು ಅ.10 ರಂದು ಕೊನೆಯುಸಿರೆಳೆದಿದ್ದಾರೆ.

ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತರಾಗಿದ್ದ ವಿನೋದ್ ರಾಜ್ ರಿಗೆ ವರ್ಷಗಳ ಹಿಂದೆ ಅಸೌಖ್ಯ ಕಾಣಿಸಿಕೊಂಡಿತ್ತು. ಇವರ ಚಿಕಿತ್ಸೆಗಾಗಿ ಸಂಘ ಪರಿವಾರದ ನೇತೃತ್ವದಲ್ಲಿ ಸಮಿತಿ ರಚಿಸಿ ಧನ ಸಂಗ್ರಹ ಕೂಡ ನಡೆಸಲಾಗಿತ್ತು. ಈ ಮಧೈ ಅವರು ತೀವ್ರ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *