ಬಂಟ್ವಾಳ: ಸಜಿಪ ಗುತ್ತು ಶ್ರೀ ನಾಗಬನದಲ್ಲಿ ಶ್ರೀ ನಾಗ ದೇವರಿಗೆ ಅಷ್ಟೋತ್ತರ ಶತ ಕಲಶ ಅಭಿಷೇಕ ಶ್ರೀ ನಾಗ ಬ್ರಹ್ಮ ದೇವರಿಗೆ ನವಕ ಕಲಶ ಅಭಿಷೇಕ ಶ್ರೀ ರಕ್ತೇಶ್ವರಿ ಸಾನಿಧ್ಯಕ್ಕೆ ನವಕ ಕಲಶ ಅಭಿಷೇಕ ಅಂಗವಾಗಿ ಪುಣ್ಯಾಹ ಭೂಸುದ್ದಿ ಹೋಮ, ವಾಸ್ತು ರಕ್ಷಾ ಹೋಮ, ವಾಸ್ತು ಬಲಿ ಪವಮಾನ ಪ್ರಾಯಶ್ಚಿತ್ತ ಹೋಮ, ಆದ್ಯ ಗಣಯಾಗ , ಪ್ರತಿಷ್ಠಾ ಪ್ರಧಾನ ಹೋಮ, ಆಶ್ಲೇಷ ಬಲಿ ಪೂಜೆ, ಸರ್ಪ ಬಲಿ ಹೋಮ, ಪ್ರಸನ್ನ ಪೂಜೆ, ನಾಗತಂಬಿಲ ಕಲ್ಪೋ ಕ್ತಪೂಜೆವಟು ಆರಾಧನೆ, ಬ್ರಾಹ್ಮಣ ಆರಾಧನೆಯು ನಡೆಯಿತು.

ಈ ಪೂಜೆಯು ಹಾಗೂ ಅನ್ನದಾನವು ಬ್ರಹ್ಮಶ್ರೀ ನೀರೇಶ್ವರ ಕೆ ಯು ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.

ಈ ಸಂದರ್ಭದಲ್ಲಿ ಸಜೀಪ ಗುತ್ತು ಗಡಿಪ್ರದಾನರಾದ ಮುತ್ತಣ್ಣ ಶೆಟ್ಟಿ ಯಾನೆ ಕಾಳಪ್ಪ ಶೆಟ್ಟಿ, ಮಾಡದಾರು ಗುತ್ತು ಗಡಿಪ್ರಧಾನರಾದ ನಾರಣ ಆಳ್ವ ಯಾನೆ ಶಶಿಧರ ರೈ, ಕು oಜ್ಞ ಪೂಜಾರಿ ಯಾನೆ ದಯಾನಂದ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




