Breaking
20 Sep 2026, Sun

ಉಡುಪಿಯ ಬಡಗುಬೆಟ್ಟು ಜುಗಾರಿ ಅಡ್ಡೆಗೆ ಪೊಲೀಸರ ದಾಳಿ, ನಾಲ್ವರು ಆರೋಪಿಗಳ ಬಂಧನ

ಉಡುಪಿ : ತಾಲೂಕಿನ 80 ಬಡಗುಬೆಟ್ಟು ಗ್ರಾಮದ ರಾಜೀವ್ ನಗರ ಬಸ್ ನಿಲ್ದಾಣದ ಹತ್ತಿರ ನಡೆದ ಜುಗಾರಿ ಅಡ್ಡಗೆ ದಾಳಿ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಜಯಂತ್ ಪೂಜಾರಿ (37), ಶರಣಪ್ಪ ಪೂಜಾರಿ (45), ಈಶ (36) ಹಾಗೂ ಹಾಲೇಶ (35) ಎಂದು ಗುರುತಿಸಲಾಗಿದೆ.

ಮಣಿಪಾಲ ಪೊಲೀಸ್ ಠಾಣೆಯ ಪಿ.ಎಸ್.ಐ ಅನೀಲ್ ಕುಮಾರ್ ಬಿ.ಎಂ ಹಾಗೂ ಸಿಬ್ಬಂದಿ ಪಡೆದ ಗುಪ್ತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿ, ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಆಟದಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

ದಾಳಿಯ ವೇಳೆ ಪೊಲೀಸರು 2,100 ರೂ. ನಗದು ಹಾಗೂ 52 ಇಸ್ಪೀಟ್ ಎಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *