Breaking
11 May 2026, Mon

ಮುಸ್ಲಿಂ ಯುವತಿ ಹಿಂದೂ ಯುವಕನೊಂದಿಗೆ ಓಡಿಹೋಗಿರುವ ಶಂಕೆ: ಯುವಕನಿಗೆ ಚಾಕು ಇರಿತ

ಚಿಕ್ಕಮಗಳೂರು: ಮುಸ್ಲಿಂ ಯುವತಿಯೊಬ್ಬಳು ಯುವಕನೊಂದಿಗೆ ಓಡಿಹೋಗಿದ್ದಾಳೆ ಎಂದು ಆರೋಪಿಸಿ ಯುವತಿಯ ಸಂಬಂಧಿಕರು ಯುವನೋರ್ವನಿಗೆ ಚೂರಿ ಇರಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಗುಂಡ್ಲುಪೇಟೆ ಎಂಬಲ್ಲಿ ನಡೆದಿದೆ.

ಯುವಕ ಆರ್ಮುಗಮ್ ಎಂಬಾತ ಚೂರಿ ಇರಿತಕ್ಕೆ ಒಳಗಾದ ಯುವಕನಾಗಿದ್ದಾನೆ.

ಮಹೇಂದ್ರ ಎಂಬಾತ ಕಾಣೆಯಾಗಿದ್ದು ಇತ್ತ ಯುವತಿ ಬೇಬಿ ಆಯೇಷಾ ಕೂಡ ಕಾಣೆಯಾಗಿದ್ದಳು. ಇತ್ತ ಮಹೇಂದ್ರ ನಾಪತ್ತೆಯಾಗಿರುವ ಬಗ್ಗೆ ಆರ್ಮುಗಮ್ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಲು ಬರುತ್ತಿದ್ದ.

ಈ ವೇಳೆ ಯುವತಿಯ ಸಂಬಂಧಿಗಳಾಗಿರುವ ಜಾಕೀರ್ ಹಾಗೂ ಆತನ ಸ್ನೇಹಿತ ತಮ್ಮ ಮನೆಮಗಳಾಗಿರುವ ಆಯೇಷಾ ಮಹೇಂದ್ರನ ಜೊತೆ ಓಡಿ ಹೋಗಿರಬೇಕು ಶಂಕಿಸಿ ಪೊಲೀಸ್ ಠಾಣೆ ಬಳಿಯೇ ಆರ್ಮುಗಮ್ ನಿಗೆ ಚಾಕು ಇರಿದು ಪರಾರಿಯಾಗಿದ್ದಾರೆ.

ಇನ್ನು ಇತ್ತ ಗಂಭೀರವಾಗಿ ಗಾಯಗೊಂಡಿರುವ ಆರ್ಮುಗಮ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಸದ್ಯ ನಾಪತ್ತೆ ಹಾಗೂ ಚಾಕು ಇರಿತ ಸಂಬAಧ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *