Breaking
11 May 2026, Mon

ಭಟ್ಕಳದಲ್ಲಿ ಸ್ಕೂಟರ್‌ಗೆ ಸರಕಾರಿ ಬಸ್ ಡಿಕ್ಕಿ, ಸವಾರ ಸಾವು

ಭಟ್ಕಳ: ಬಸ್ ಸ್ಕೂಟರ್‌ಗೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಅ.5 ರಂದು ಭಾನುವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಮೂಡ್ ಭಟ್ಕಳದಲ್ಲಿ ನಡೆದಿದೆ.

ಮೃತರನ್ನು ಪುರುವರ್ಗ ನಿವಾಸಿ ಸುಂದರ್ ಆಚಾರಿ (50) ಎಂದು ಗುರುತಿಸಲಾಗಿದೆ

ಸುಂದರ್ ಆಚಾರಿ ಅವರು ಪುರುವರ್ಗದಿಂದ ಭಟ್ಕಳದ ಕಡೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಮಣಿಪಾಲದಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸರಕಾರಿ ಬಸ್ ಹಿಂದಿನಿಂದ ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದಿದ್ದರು. ದುರದೃಷ್ಟವಶಾತ್, ಅವರು ಬೀಳುತ್ತಿದ್ದಂತೆ, ಬಸ್ ಚಕ್ರ ಅವರ ತಲೆಯ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರು ಪತ್ನಿ, ಒಬ್ಬ ಪುತ್ರಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಭಟ್ಕಳ ವೃತ್ತ ಪೊಲೀಸ್ ಇನ್ಸ್ಪೆಕ್ಟರ್ ದಿವಾಕರ್ ತಮ್ಮ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *