Breaking
19 Sep 2026, Sat

ಬಸ್ ಮಾಲೀಕ ಸೈಫುದ್ದೀನ್ ಹತ್ಯೆ ಪ್ರಕರಣ : ನಾಲ್ಕನೇ ಆರೋಪಿ ಪೊಲೀಸ್‌ ವಶಕ್ಕೆ

ಉಡುಪಿ: ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣದ ನಾಲ್ಕನೇ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಪ್ರಕರಣದ ಮೊದಲ ಆರೋಪಿ ಫೈಜಲ್ ಖಾನ್ ಅವರ ಪತ್ನಿ ರಿಧಾ ಶಬಾನಾ (27) ಎಂಬುವುದಾಗಿ ಗುರುತಿಸಲಾಗಿದೆ.

ಇದಕ್ಕೂ ಮೊದಲು, ಪ್ರಕರಣದ ವಿಚಾರವಾಗಿ ಸೈಫುದ್ದೀನ್‌ನ ಮೂವರು ಸ್ನೇಹಿತರಾದ ಫೈಜಲ್ ಖಾನ್, ಶುಕೂರ್ ಮತ್ತು ಶರೀಫ್ ಅವರನ್ನು ಬಂಧಿಸಲಾಗಿತ್ತು.

ಸದ್ಯ, 4ನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಶಬಾನಾ ಹತ್ಯೆಯ ಯೋಜನೆಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ.

ಉಡುಪಿ-ಮಂಗಳೂರು ಜಿಲ್ಲೆಯಲ್ಲಿ ಸಾರಿಗೆ ಸೇವೆ ನೀಡುತ್ತಿದ್ದ ಎಕೆಎಂಎಸ್ ಖಾಸಗಿ ಬಸ್ ಸಂಸ್ಥೆಯ ಮಾಲೀಕ ಸೈಫುದ್ದೀನ್ ಅಲಿಯಾಸ್ ಸೈಫ್ (52) ಅವರನ್ನು ಮಲ್ಪೆಯ ಕೊಡವೂರು ಸಮೀಪದ ನಾಗಬನದ ಬಳಿ ಇರುವ ಮನೆಯಲ್ಲಿ ಸೆ.27 ಬೆಳಗ್ಗೆ ಚಾಕು, ತಲವಾರ್ನಿಂದ ಕೊಚ್ಚಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.

ಈ ಸಂಬಂಧ ತನಿಖೆ ಚುರುಕುಗೊಳಿಸಿರುವ ಪೊಲೀಸರು ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *