Breaking
19 Sep 2026, Sat

ಇನ್ನೋವಾ ಕಾರು-ಟಿಪ್ಪರ್ ಅಪಘಾತ: ಓರ್ವ ಸಾವು, ಇನ್ನಿಬ್ಬರು ಗಂಭೀರ

ಮೈಸೂರು: ಇನ್ನೋವಾ ಕಾರು-ಟಿಪ್ಪರ್ ನಡುವೆ ಮುಖಾಮುಖಿ ಢಿಕ್ಕಿಯಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಹೆದ್ದಾರಿಯ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಚಿಲ್ಕುಂದ ತಂಬಾಕು ಮಾರುಕಟ್ಟೆ ಬಳಿ ಅ.3ಸಂಜೆ ನಡೆದಿದೆ.

ಸರಗೂರು ತಾಲೂಕಿನ ತುಂಬಸೋಗೆ ಗ್ರಾಮದ ಮಲ್ಲಿಕಾರ್ಜುನ(39) ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಸ್ನೇಹಿತರಾದ ಸರಗೂರು ಪಟ್ಟಣದ ಪೆಟ್ರೋಲ್ ಬಂಕ್ ಮಾಲಿಕ ಶಮಂತ್ ಮತ್ತು ಚೇತನ್ ಗಾಯಗೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿರುವ ಸ್ನೇಹಿತನನ್ನ ಕರೆದುಕೊಂಡು ಬರಲು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.ಸದ್ಯ ಗಾಯಾಳುಗಳನ್ನು ಹುಣಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಅಪಘಾತದಿಂದ ರಭಸಕ್ಕೆ ಕಾರಿನ ಮುಂಬಾಗ ಟಿಪ್ಪರ್ ಗೆ ಢಿಕ್ಕಿ ಹೊಡೆದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಸಿಲುಕಿಕೊಂಡಿತ್ತು.

ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *