Breaking
11 May 2026, Mon

ಕಾರ್ಕಳ: ಮಹಿಳೆಗೆ ಮಾರಕಾಸ್ತ್ರ ತೋರಿಸಿ ದನಗಳನ್ನು ಕದ್ದೊಯ್ದ ಕಿಡಿಗೇಡಿಗಳು

ಕಾರ್ಕಳ: ಮಾರಕಾಸ್ತ್ರ ತೋರಿಸಿ ಮಹಿಳೆಯನ್ನು ಬೆದರಿಸಿ ಕಿಡಿಗೇಡಿಗಳು ಮೂರು ದನಗಳನ್ನು ಕಳವುಗೈದ ಘಟನೆ ಶಿರ್ಲಾಲಿನಲ್ಲಿ ನಡೆದಿದೆ.

ಜಯಶ್ರೀ ಎಂಬವರು ತನ್ನ ಮನೆಯಲ್ಲಿ ಒಬ್ಬರೆ ಇದ್ದ ವೇಳೆ ಮನೆಯ ಹಟ್ಟಿಗೆ ನುಗ್ಗಿದ ಕಿಡಿಗೇಡಿಗಳು ದನಗಳನ್ನು ಕದಿಯಲು ಯತ್ನಿಸಿದ್ದಾರೆ. ಶಬ್ದ ಕೇಳಿ ಮನೆಯ ಹೊರಗೆ ಬಂದ ಜಯಶ್ರೀಯವರಿಗೆ ಕಿಡಿಗೇಡಿಗಳು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿ, ದನಗಳನ್ನು ಕದ್ದೊಯ್ದಿದ್ದಾರೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *