Breaking
25 Sep 2026, Fri

ಓಮ್ನಿ ಕಾರು ಸೈಕಲ್‌ ಗೆ ಡಿಕ್ಕಿ: ಸೈಕಲ್‌ ಸವಾರ ಗಂಭೀರ ಗಾಯ

ಉಡುಪಿ: ಓಮ್ನಿ ಕಾರು ಸೈಕಲ್‌ ಗೆ ಡಿಕ್ಕಿ ಹೊಡೆದು ಸೈಕಲ್‌ ಸವಾರ ಗಂಭೀರ ಗಾಯಗೊಂಡ ಘಟನೆ ಸಿದ್ದಾಪುರದ ಅಮಾಸೆಬೈಲು-ಹಾಲಾಡಿ ರಸ್ತೆಯ ಅರಣ್ಯ ಇಲಾಖೆ ಕಚೇರಿ ಬಳಿ ನಡೆದಿದೆ.

ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಮಹಾಬಲ ಪೂಜಾರಿ (55) ಎಂದು ಗುರುತಿಸಲಾಗಿದೆ.

ಚಾಲಕನ ಅತಿವೇಗದ ಚಾಲನೆಯಿಂದ ಈ ಘಟನೆ ನಡೆದಿದ್ದು, ಅಪಘಾತದಿಂದ ಗಾಯಗೊಂಡಿರುವ ಗಾಯಾಳುವನ್ನು ಹಾಲಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಕರ್ತವ್ಯಕ್ಕೆ ತೆರಳುತ್ತಿದ್ದ ಹಾಲಾಡಿಯ ಪೊಲೀಸ್ ಸಿಬ್ಬಂದಿ ಶಶಿಧರ್ ಶೆಟ್ಟಿ ತಕ್ಷಣ ಪ್ರಥಮ ಚಿಕಿತ್ಸೆ ನೀಡಿದರು. ಸ್ಥಳೀಯರಾದ ನಂದನ್, ಅರುಣ್ ಶೆಟ್ಟಿ ಮತ್ತು ರಾಜೇಶ್ ಅವರ ಸಹಕಾರದಿಂದ ಗಾಯಾಳುವನ್ನು ಚಿಕಿತ್ಸೆಗಾಗಿ ಮೊದಲು ಹಾಲಾಡಿ ಆಸ್ಪತ್ರೆಗೆ ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು.

Leave a Reply

Your email address will not be published. Required fields are marked *