Breaking
22 Mar 2026, Sun

ರೇಬಿಸ್ ರೋಗಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡ ಪೊಲೀಸ್ ಇನ್ಸ್ ಪೆಕ್ಟರ್

ಅಹಮದಾಬಾದ್: ತಾನು ಪ್ರೀತಿಯಿಂದ ಸಾಕಿದ್ದ ಶ್ವಾನದಿಂದ ಪೊಲೀಸ್ ಅಧಿಕಾರಿ ಪ್ರಾಣ ಕಳೆದುಕೊಂಡ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ.

ಅಹಮದಾಬಾದ್‌ ನ ಸಿಟಿ ಕಂಟ್ರೋಲ್ ರೂಮ್‌ ನಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ವನರಾಜ್ ಮಂಜರಿಯಾ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಪ್ರೀತಿಯಿಂದ ಸಾಕಿದ್ದ ಜರ್ಮನ್ ಶೆಫರ್ಡ್‌ ಶ್ವಾನವನ್ನು ದಿನಾಲೂ ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದರು. ಅದರಂತೆ ಒಂದು ದಿನ ಜರ್ಮನ್ ಶೆಫರ್ಡ್‌ ನಾಯಿಯ ಉಗುರು ಪೊಲೀಸ್ ಇನ್ಸ್‌ಪೆಕ್ಟರ್ ಕೈಯನ್ನ ಪರಚಿದೆ.

ಈ ಬಗ್ಗೆ ಗಮನ ಹರಿಸದ ಪೊಲೀಸ್ ಇನ್ಸ್‌ಪೆಕ್ಟರ್ , ಯಾವುದೇ ಡಾಕ್ಟರ್ ಗಳ ಸಂಪರ್ಕ ಮಾಡಿರಲಿಲ್ಲ. ದಿನ ಕಳೆದಂತೆ ಅವರ ವರ್ತನೆ ಬದಲಾವಣೆ ಆಗುತ್ತ ಸಾಗಿತು. ಹೀಗಾಗಿ ಅವರನ್ನು ಅಹಮದಾಬಾದ್‌ನಲ್ಲಿರುವ ಕೆಡಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ದುರಾದೃಷ್ಟವಶಾತ್ ಇನ್ಸ್‌ಪೆಕ್ಟರ್ ವನರಾಜ್ ರೇಬಿಸ್‌ ಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *