Breaking
25 Mar 2026, Wed

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಗೆ ರುದ್ರನುಷ್ಟಾನ ಸಮರ್ಪಣಾ ಸೇವೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀರಾಮಚಂದ್ರಪುರ ಮಠದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳವರ ಅನುಗ್ರಹದೊಂದಿಗೆ ಮಂಜುನಾಥ ಸ್ವಾಮಿಗೆ ರುದ್ರನುಷ್ಟಾನ ಸಮರ್ಪಣೆ ಸೇವೆಯು ಸೆ. 20 ರಂದು ನಡೆಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರತಿನಿಧಿಗಳಾದ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಎ .ರವಿ ಶಂಕರ ಮೈಯ್ಯ, ಶಾಂತರಾಮರಾವ್, ಏನ್. ರಾಮಚಂದ್ರಮಯ್ಯ, ಶಿವಪ್ರಸಾದ್ ಕಾರಂತ, ಎಂ ಜಯರಾಮಯ್ಯ, ನರಸಿಂಹಮ ಮಯ್ಯ , ಪರಮೇಶ್ವರ ಹೊಳ್ಳ, ಪ್ರಭಾಕರ ಸೋಮಯಾ ಜಿ, ಪ್ರಕಾಶ್ ಭಟ್ ಸಜೀಪ ನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳoಜ ವೆಂಕಟೇಶ್ವರ ಭಟ್ ಸೇರಿದಂತೆ ಅನೇಕರು ಭಾಗವಹಿಸಿ ಗಣಪತಿ ಅಥರ್ವ ಶಿರ್ಶ ಮಂತ್ರ , ಭಾಗ್ಯ ಸೂಕ್ತ, ಲಗುನ್ಯಾಸ, ರುದ್ರ ಪಠಣ, ಚಮಕ, ಪುರುಷ ಸೂಕ್ತ, ಶ್ರೀ ಸೂಕ್ತ ಸಾಮೂಹಿಕ ಮಂತ್ರ ಪಠಣವನ್ನು ನೆರವೇರಿಸಿದರು.

Leave a Reply

Your email address will not be published. Required fields are marked *