ಬಂಟ್ವಾಳ: ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ತಿನ ವತಿಯಿಂದ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿಯು ಮತ್ತು ಭಾವೈಕ್ಯತಾ ಸಾಹಿತ್ಯ ರತ್ನ ಮತ್ತು ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವು ದೇರಳಕಟ್ಟೆಯ ಅಲ್ ಸಲಾಮ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವಸಂತ ಜೋಗಿ ಕುಂದಾಪುರ ಉದ್ಘಾಟಿಸಿ , ನಾರಾಯಣ ರೈ ಕುಕ್ಕುವಳ್ಳಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಡಾ. ರವಿ ಕಕ್ಕೆಪದವು, ಕೆ.ಟಿ.ರಾಜೇಂದ್ರ ಹೊಳ್ಳ ಕಲ್ಲಡ್ಕ, ಡಾ.ಹರ್ಷ ಕುಮಾರ್ ರೈ ಪುತ್ತೂರು, ಅಬ್ದುಲ್ ರಹಿಮಾನ್ ಸಂಕೇಶ ಇವರಿಗೆ ಸಮಾಜ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿರಿಯ ಕವಿಗಳಾದ ಪತ್ರಕರ್ತ ಜಯಾನಂದ ಪೆರಾಜೆ, ಶಿಕ್ಷಕಿ ಡಾ. ಶಾಂತ ಪುತ್ತೂರು , ವೈದ್ಯ ಡಾ. ಸುರೇಶ ನೆಗಳಗುಳಿ , ಹಾ.ಮ. ಸತೀಶ , ವಿರಾಜ್ ಅಡೂರು , ಮಲ್ಲಿಕಾ ಜೆ. ರೈ, ಪ್ಲಾವಿಯ ಅಲ್ಬುಕರ್ಕ್ , ಬಶೀರ್ ಅಹ್ಮದ್ ಬಂಟ್ವಾಳ, ಸಹನಾ ಕಾಂತಬೈಲು, ರತ್ನಾ ಕೆ. ತಲಂಜೇರಿ ಇವರಿಗೆ ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಡಾ. ಹರ್ಷ ಕುಮಾರ್ ರೈ, ಅಬ್ದುಲ್ ರಹಿಮಾನ್ , ಯು.ಟಿ. ಇಫ್ತಿಖಾರ್ ಅಲಿಯವರಿಗೆ ಶಿಕ್ಷಣ ರತ್ನ ಪ್ರಶಸ್ತಿ ನೀಡಲಾಯಿತು. ಭಾವೈಕ್ಯತಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಭೀಮ ರಾವ್ ವಾಷ್ಠರ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸೌಹಾರ್ದತೆ ಮತ್ತು ಮಾದಕತೆಯ ವಿರುದ್ಧ ಕವಿಗಳು ಚುಟುಕು ಕವನ ವಾಚಿಸಿದರು. ಅಬೂಬಕ್ಕರ್ ಅನಿಲಕಟ್ಟೆ ಸ್ವಾಗತಿಸಿ, ಕೆ.ಎ. ಅಬ್ದುಲ್ ಅಝೀಜ್ ಪುಣಚ ವಂದಿಸಿದರು, ಸಂಘಟಕ ಇಕ್ಬಾಲ್ ಬಾಳಿಲ ನಿರೂಪಿಸಿದರು.



