Breaking
20 Sep 2026, Sun

ಟೀ ಅಂಗಡಿಯೊಳಗೆ ನುಗ್ಗಿದ ಪೊಲೀಸ್‌ ವ್ಯಾನ್‌: ಟೀ ಮಾರಾಟಗಾರ ಸ್ಥಳದಲ್ಲೇ ಸಾವು

ನವದೆಹಲಿ: ದೆಹಲಿ ಪೊಲೀಸರ ವಾಹನ ಟೀ ಸ್ಟಾಲ್‌ ಗೆ ನುಗ್ಗಿದ ಪರಿಣಾಮ ಮಾಲೀಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನವದೆಹಲಿಯ ಗೋಲೆ ಮಾರ್ಕೆಟ್‌ ಪ್ರದೇಶದಲ್ಲಿ ಇಂದು( ಸೆ.18) ನಡೆದಿದೆ.

ಮೃತ ವ್ಯಕ್ತಿಯನ್ನು ವಿಶೇಷಚೇತನ ವ್ಯಕ್ತಿ ಗಂಗಾರಾಮ್‌ ತಿವಾರಿ (50) ಎಂದು ಗುರುತಿಸಲಾಗಿದೆ.

ಅವರು ಕಳೆದ ಒಂದು ದಶಕದಿಂದ ರಾಮಕೃಷ್ಣ ಆಶ್ರಮದ ಮೆಟ್ರೋ ನಿಲ್ದಾಣ ಸಮೀಪ ಟೀ ಸ್ಟಾಲ್‌ ಅನ್ನು ನಡೆಸುತ್ತಿದ್ದರು. ಆದರೆ ಇಂದು ಬೆಳಗ್ಗೆ ಪೊಲೀಸ್‌ ಕಂಟ್ರೋಲ್‌ ರೂಂನ ವ್ಯಾನ್‌ ರಸ್ತೆ ಬದಿಯ ಡಿವೈಡರ್‌ ಗೆ ಡಿಕ್ಕಿ ಹೊಡೆದು ಟೀ ಸ್ಟಾಲ್‌ ಒಳಗೆ ನುಗ್ಗಿದ್ದು, ಪರಿಣಾಮ ನಿದ್ರಿಸುತ್ತಿದ್ದ ತಿವಾರಿ ಅವರ ಮೇಲೆ ವಾಹನ ಹತ್ತಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸ್‌ ಸಬ್‌ ಇನ್ಸ್‌ ಪೆಕ್ಟರ್‌ ಹಾಗೂ ಕಾನ್ಸ್‌ ಟೇಬಲ್‌ ಅನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *