Breaking
23 Mar 2026, Mon

ಜಾಲಹಳ್ಳಿ ಶ್ರೀರಾಮ ಸಮೀಕ್ಷ ಕ್ಲಬ್ ಹೌಸ್ ಸಭಾಂಗಣದಲ್ಲಿ “ಕೊಂಕಣಿ ಸಂಭ್ರಮ್ 2025”

ಬೆಂಗಳೂರು: ಜಾಲಹಳ್ಳಿ ಶ್ರೀರಾಮ ಸಮೀಕ್ಷ ಕ್ಲಬ್ ಹೌಸ್ ಸಭಾಂಗಣದಲ್ಲಿ ಕೆಬಿಎಂಕೆಯು ಮತ್ತು ಅವರ್ ಲೇಡಿ ಆಫ್ ಫಾತಿಮ ಚರ್ಚ್ ಜಾಲಹಳ್ಳಿ ಕೊಂಕಣಿ ಕುಟಮ್ ಜೊತೆಗೂಡಿ “ಕೊಂಕಣಿ ಸಂಭ್ರಮ್ 2025” ಸೆ. ೧೪ ರಂದು ನಡೆಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ಅವರು ಕೊಂಕಣಿ ಮಾತೃಭಾಷೆ ಸೇವೆಯನ್ನು ಕೊಂಕಣಿ ಜನರು ಇದ್ದಲ್ಲಿ ಹೋಗಿ ಅವರ ಸಾಹಿತ್ಯ, ಸಂಸ್ಕೃತಿ ಮತ್ತು ಸೇವೆಯನ್ನು ಸಂಭ್ರಮಿಸಿ ಮಾಡಬೇಕು. ಸಾಹಿತ್ಯದ ಅಗತ್ಯ ಬಹಳಷ್ಟು ಇದೆ. ಅದೂ ಎಐಗೂ ಇದೆ. ಸಾಹಿತಿಗಳು ಆಥರ್‌ಗಳು ಬರೆದ ಇಂಟೆಲಿಜೆನ್ಸ್ ವೆಲ್ತ್ ಅನ್ನು ಎಐ ಮರುಕೊಡಬಹುದು ಅಷ್ಟೇ. ಆದ್ದರಿಂದ ನಾವೆಲ್ಲರೂ ಸಾಹಿತ್ಯ ಮತ್ತು ಸಾಹಿತ್ಯೇತರ ಬರಹಗಳು ನಿರಂತರ ಯಾವುದೇ ಅಡೆತಡೆಗಳನ್ನು ಲೆಕ್ಕಿಸದೆ ಬರೆಯಬೇಕು ಎಂದು ಮನವಿ ಮಾಡಿದರು.

ಮುಖ್ಯ ಅತಿಥಿ ಪ್ರೊಫೆಸರ್ ಉರ್ಬನ್ ಡಿಸೋಜ ಅವರು ಕೊಂಕಣಿ ಭಾಷೆ, ಸಂಸ್ಕತಿ, ಸಾಹಿತ್ಯಕ್ಕಾಗಿ ದುಡಿದ ಹಿರಿಯ ಮಹಿಳಾ ಸಾಹಿತಿಗಳಾದ ಲಿಲ್ಲಿ ಮಿರಾಂದ, ಹಾಗೂ ಅಪೊಲಿನ್ ಡಿಸೋಜ ಅವರಿಗೆ ಸನ್ಮಾನಿಸಿ ಬಳಿಕ ಮಾತನಾಡಿದ ಅವರು “ಸನ್ಮಾನಗಳು ಬರಹಕ್ಕೆ ಅರಸಿ ಬರಬೇಕು, ಸನ್ಮಾನ ಹುಡುಕಿ ಸಾಹಿತ್ಯ ಬರೆಯುವುದು ಸರಿಯಲ್ಲ. ಸನ್ಮಾನಕ್ಕಾಗಿ ಬರೆದರೆ ನಾವು ಆಸ್ಥಾನ ಹೊಗಳು ಭಟರು ಆಗುತ್ತೇವೆ” ಎಂದು ಟೀಕಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾದ ವಲೇರಿಯನ್ ಪಿಂಟೊ ತನಗೆ ನೀಡಿದ ಗೌರವ ಸ್ವೀಕರಿಸಿ ಮಾತನಾಡಿ ಕೊಂಕಣಿ ಜಾಲಹಳ್ಳಿ ಬೆಂಗ್ಳುರ್ ಪ್ರದೇಶದಲ್ಲಿ ಉಳಿಸಲು ತಾವು ಪಟ್ಟ ಶ್ರಮವನ್ನು ವಿವರಿಸಿದರು.

ವೇದಿಕೆಯಲ್ಲಿ ಎಫ್ ಕೆ ಸಿ ಎ ನೂತನ ಆಧ್ಯಕ್ಷರಾದ ಆ್ಯಂಟನಿ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು . ಕ್ಯಾರಲ್ ಅರಾನ್ನಾ ಸ್ವಾಗತಿಸಿ, ಸಂಚಾಲಕಿ ಮತ್ತು ಕೆಬಿಎಂಕೆ ಸದಸ್ಯರು ಜೆನೆಟ್ ವಾಸ್ ವಂದಿಸಿದರು. ಜೊಯೆಲ್ ಅರಾನ್ನಾ ಮತ್ತು ಪ್ರೆಸಿಲ್ಲಾ ಪಿಂಟೊ ನಿರೂಪಿಸಿದರು. ಸನ್ಮಾನಿತರ ಪರಿಚಯ ಐಡಾ ಎಲಿಜಾ ಮಿನೆಜಸ್ ನೀಡಿದರು.

ಕಾರ್ಯಕ್ರಮದಲ್ಲಿ ಇಪ್ಪತ್ತಕ್ಕೂ ಹೆಚ್ಚು ವೈಯಕ್ತಿಕ ಮತ್ತು ಗುಂಪುಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿತು. ಕೊಂಕಣಿ ಹಾಡು, ನೃತ್ಯ, ಕವಿತೆ, ಗಾದೆಗಳು, ಕಥೆ, ಚುಟುಕು, ರಿಡಲ್ಸ್ ಹೀಗೆ ವೈವಿಧ್ಯಮಯ ಪ್ರದರ್ಶನಗಳು ನಡೆದವು.

ಜಾಕ್ಲಿನ್ ಲೋಬೊ ಬಳಗ ನೃತ್ಯ, ಜೋತಿ ಡಿಸೋಜ ಕವಿತಾ ವಾಚನ, ಅಪೊಲಿನ್ ಡಿಸೊಜ ಗಾದೆಗಳು, ಮೆಲಿಟಾ ಮತ್ತು ಮೆಲಿಶಾ ನೃತ್ಯ, ಈತನ್ ಹಾಡು, ಸುನಿತಾ ಡಿಸೋಜ ಹಾಡು, ಮಿಥುನ್ ಕರ್ನೆಲಿಯೊ ಕಥೆ, ಅನಿತಾ ಪಿಂಟೊ ಕವಿತೆ, ಅನು ರಿಡಲ್ಸ್, ಲವಿನಾ ಫೆರ್ನಾಂಡೀಸ್ ಹಾಡು, ವಿನ್ಸೆಂಟ್ ಡಿಸೋಜ ಚುಟುಕುಗಳು, ವಿಪಿನ್ ಡಿಸೋಜ ಹಾಡು, ರೇಮಂಡ್ ಡಿಕೂನಾ ತಾಕೊಡೆ ಚಾರೊಳಿ ಮತ್ತು ಕವಿತೆ, ಡಾಯ್ನೆಟ್ ಕಾರ್ಡೊಜಾ ಹಾಡು, ಮಹಿಳೆಯರ ಗುಂಪು ನೃತ್ಯ, ಜೆನೆಟ್ ಪ್ರೆಸಿಲ್ಲಾ ವಾಸ್ ಕವಿತೆ, ಜೊನ್ ಅಡ್ಯಾರ್ ಕವಿತೆ , ಉಬ್ಬ ಮೂಡುಬಿದಿರೆ ಕವಿತೆ, ಐವಿ ಡಿಸೋಜ ಹಾಡು, ಶರಣ್ ರೇಗೊ ಹಾಡು, ಮಕ್ಕಳು ವಿಶೇಷ ನೃತ್ಯ ಮತ್ತು ಹಾಡು ಪ್ರಸ್ತುತ ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನ ಗೆದ್ದಿತು.

ರೊಲ್ಫಿ ಪಿಂಟೊ, ನವೀನ್ ಫೆರ್ನಾಂಡೀಸ್, ಜೆಸಿಂತ ಡಿಸೋಜ, ಮೀರಾ ಡಿಸೋಜ, ಜೋನ್ ಡಿಸೋಜ ಅ್ಯನ್ ಡಿಸೋಜ, ಅ್ಯನ್ಸನ್ ಡಿಸೋಜ ಮತ್ತು ಚರ್ಚಿನ ಕೊಂಕಣಿ ಮಾತೃಭಾಷೆ ಜನರು ಸಹಕರಿಸಿದರು.

Leave a Reply

Your email address will not be published. Required fields are marked *