Breaking
20 Sep 2026, Sun

ಉಡುಪಿಯಲ್ಲಿ ಹೆಬ್ಬಾವನ್ನು ರಕ್ಷಣೆ ಮಾಡಿದ ಹುಲಿವೇಷಧಾರಿ

ಉಡುಪಿ: ಅಷ್ಟಮಿಯ ಪ್ರಯುಕ್ತ ಹುಲಿವೇಷ ಹಾಕಿ ಕುಣಿಯುತ್ತಿದ್ದ ವೇಷಾಧಾರಿಯೊಬ್ಬರು ಹೆಬ್ಬಾವನ್ನು ರಕ್ಷಣೆ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಅಕ್ಷಯ್ ಶೇಟ್ ಗುಂಡಿಬೈಲ್ ಹೆಬ್ಬಾವನ್ನು ರಕ್ಷಣೆ ಮಾಡಿರುವ ಹುಲಿ ವೇಷಾಧಾರಿಯಾಗಿದ್ದಾರೆ. ವೃತ್ತಿಯಲ್ಲಿ ಐಟಿ ಪ್ರೊಫೆಷನಲ್ ಆಗಿರುವ ಅಕ್ಷಯ್ ಶೇಟ್ ಅವರು ಅಷ್ಟಮಿಯ ಪ್ರಯುಕ್ತ ಹುಲಿವೇಷ ಹಾಕಿ ಕುಣಿಯುತ್ತಿದ್ದರು. ಈ ವೇಳೆ ಹಾವು ಬಂದಿರುವ ಬಗ್ಗೆ ತುರ್ತು ಕರೆಯೊಂದು ಬಂದಿದೆ.

ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಬಿಡುವಲ್ಲಿ ಪರಿಣತಿ ಹೊಂದಿರುವ ಅಕ್ಷಯ್ ಅವರು ತಮ್ಮ ವೇಷ ಬದಲಾಯಿಸದೆ ನೇರವಾಗಿ ಸ್ಥಳಕ್ಕೇ ಧಾವಿಸಿದರು. ಕೆಲವೇ ಕ್ಷಣಗಳಲ್ಲಿ ಸ್ತಳಕ್ಕೆ ಧಾವಿಸಿದ ಅವರು ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಅಕ್ಷಯ್ ಶೇಟ್ ಅವರ ಈ ಕಾರ್ಯ ಸಾರ್ವಜನಿಕರ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Leave a Reply

Your email address will not be published. Required fields are marked *