Breaking
24 Mar 2026, Tue

ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಸುಳ್ಯ ಸುಶ್ಮಿತಾ ಬೆದ್ರುಪಣೆಗೆ ಶಾಸಕರಿಂದ ಸನ್ಮಾನ

ಸುಳ್ಯ: ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾದ ಸುಳ್ಯದ ಅರಂತೋಡು ಗ್ರಾಮದ ಸುಶ್ಮಿತಾ ಬೆದ್ರುಪಣೆ ನಿವಾಸಕ್ಕೆ ಸ್ಥಳೀಯ ಸೆ.16 ಶಾಸಕಿ ಭಾಗೀರತಿ ಮುರುಳ್ಯ ಭೇಟಿ ನೀಡಿ ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು.

ಈ ಸಂದರ್ಭ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೇಶವ ಅಡ್ತಲೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ ಕಂಜಿಪಿಲಿ, ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಕುತ್ತಮೊಟ್ಟೆ, ಮಾಜಿ ಜಿಲ್ಲಾಪಂಚಾಯತ್ ಸದಸ್ಯ ಸತೀಶ ನಾಯ್ಕ, ಅರಂತೋಡು , ಮಾಜಿ ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷೆ ಪುಷ್ಪ ಮೇದಪ್ಪ ಉಳುವಾರು , ಸುಳ್ಯ ಮಂಡಲ ಸಮಿತಿ ಕೋಶಾಧಿಕಾರಿ ಸುಬೋಧ್ ಶೆಟ್ಟಿ ಮೆನಾಲ, ಭಾರತಿ ಉಳುವಾರು, ಗುತ್ತಿಗೆದಾರ ನವೀನ್ ಚಂದ್ರ ಗುತ್ತು,ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸದಸ್ಯ ಪ್ರಸಾದ ಕಾಟೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *