Breaking
19 Sep 2026, Sat

ಕೊಪ್ಪಳದಲ್ಲಿ ನಗರಸಭೆ ಕಚೇರಿ ಸೇರಿ ಐದು ಕಡೆ `ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ

ಕೊಪ್ಪಳ: ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಆರೋಪ ಹಾಗೂ ವಿವಿಧ ದೂರುಗಳು ಬಂದ ಹಿನ್ನಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ನಗರಸಭೆ ಕಚೇರಿ ಸೇರಿ ಐದು ಕಡೆ ದಾಳಿ ನಡೆಸಿದ್ದಾರೆ.

ಕೊಪ್ಪಳದ ನಗರಸಭೆ ಕಚೇರಿ, ನಗರಸಭೆ ಜೆಇ ಸೋಮಲಿಂಗಪ್ಪ, ಕಂದಾಯ ನಿರೀಕ್ಷಕ ಉಜ್ವಲ್, ಗುತ್ತಿಗೆದಾರರಾದ ಶಕೀಲ್ ಪಟೇಲ್, ಪ್ರವೀಣ ಕಂದಾರಿ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಐದು ತಂಡಗಳನ್ನು ರಚಿಸಿ ಡಿವೈಎಸ್ಪಿ ವಸಂತಕುಮಾರ್, ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ಗಳಾದ ವಿಜಯಕುಮಾರ್, ಚಂದ್ರಪ್ಪ, ನಾಗರತ್ನ, ಶೈಲಾ, ಅಮರೇಶ ಹುಬ್ಬಳ್ಳಿ ಸೇರಿ ಹಲವು ಸಿಬ್ಬಂದಿಗಳು ಭಾಗಿಯಾಗಿದ್ದಾರೆ.

Leave a Reply

Your email address will not be published. Required fields are marked *