Breaking
20 Sep 2026, Sun

12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ ಉಪ್ಪಿನಂಗಡಿ ಪೊಲೀಸರು

ಪುತ್ತೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಆರೋಪಿಯನ್ನು ಇಮ್ರಾನ್ ಖಾನ್ (36) ಎಂದು ಗುರುತಿಸಲಾಗಿದೆ.

ಇಮ್ರಾನ್ ಖಾನ್ ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು LPC ವಾರೆಂಟ್ ಹೊರಡಿಸಿತ್ತು.

ಈ ಬಗ್ಗೆ ಉಪ್ಪಿನಂಗಡಿ ಠಾಣಾ ಹೆಚ್.‌ ಸಿ ಶಿವರಾಮ ರೈ, ಪುತ್ತೂರು ಪೊಲೀಸ್ ಉಪಾಧೀಕ್ಷಕರ ವಿಶೇಷ ತಂಡದ ಸಿಬ್ಬಂದಿ ಹೆಚ್ ಸಿ ಗಣೇಶ್ ಎನ್ ಎಂಬವರು ಖಚಿತ ಮಾಹಿತಿಯೊಂದಿಗೆ ಆರೋಪಿಯನ್ನು ಬೆಂಗಳೂರು ನಗರದ ಕೆ,ಜಿ ಹಳ್ಳಿ ಎಂಬಲ್ಲಿಂದ ದಸ್ತಗಿರಿ ಮಾಡಿ ,ಮಾನ್ಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ .

Leave a Reply

Your email address will not be published. Required fields are marked *