Breaking
23 Mar 2026, Mon

ಮಂಗಳೂರು : ಎಂಜಿನ್ ವೈಫಲ್ಯದಿಂದ ಮೀನುಗಾರಿಕಾ ಬೋಟ್‌ ಪಲ್ಟಿ

ಮಂಗಳೂರು : ಉಳ್ಳಾಲ ಸೀಗ್ರೌಂಡ್‌ನಲ್ಲಿ ಮೀನುಗಾರಿಕೆ ತೆರಳಿದ್ದ ಬೋಟ್‌ ಎಂಜಿನ್ ವೈಫಲ್ಯದಿಂದ ಸಮುದ್ರ ತಟದ ಕಲ್ಲು ಬಂಡೆಗಳಿಗೆ ಬಡಿದು ಪಲ್ಟಿ ಹೊಡೆದ ಘಟನೆ ಇಂದು (ಸೆ.15) ರ ಮುಂಜಾನೆ ನಡೆದಿದೆ.

ಹಡಗಿನಲ್ಲಿದ್ದ 13 ಮಂದಿ ಮೀನುಗಾರರು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ.

ಬುರಾಕ್ ಟ್ರಾಲರ್ ಎಂಬ ದೋಣಿ ಉಳ್ಳಾಲದ ಮುಕ್ಕಚ್ಚೇರಿ ನಿವಾಸಿ ಮೊಹಮ್ಮದ್ ಅಶ್ಫಾಕ್ ಅವರಿಗೆ ಸೇರಿದ್ದು, ಭಾನುವಾರ ರಾತ್ರಿ ಈ ಹಡಗು ಮಂಗಳೂರು ಬಂದರಿನಿಂದ ಕೇರಳದ ಕಡೆಗೆ ಆಳ ಸಮುದ್ರ ಮೀನುಗಾರಿಕೆಗಾಗಿ ಹೊರಟಿತ್ತು. ಅದೃಷ್ಟವಶಾತ್, ಸಮುದ್ರ ಅಲೆಗಳ ಹೊಡೆತಕ್ಕೆ ಸಿಲುಕಿ, ದೋಣಿ ಕರಾವಳಿಯ ಕಡೆಗೆ ಸಾಗಿ ಸೋಮವಾರ ಮುಂಜಾನೆ ಸೀಗ್ರೌಂಡ್ ಬಳಿ ಎಂಜಿನ್‌ ಹಠಾತ್ತಾಗಿ ಬಂದ್‌ ಆಗಿ ಕಡಲ ತೀರಕ್ಕೆ ಡಿಕ್ಕಿ ಹೊಡೆದಿದೆ.

ಈ ಘಟನೆಯಿಂದ ದೋಣಿ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಈ ಕುರಿತು ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *