ಮೈಸೂರು: ಧರ್ಮಸ್ಥಳದ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ವಿರೋಧಿಸಿ ಮೈಸೂರಿನ ವಕೀಲರು ಧರ್ಮಸ್ಥಳದ ಪರ ಧ್ವನಿ ಎತ್ತಿದ್ದಾರೆ. ಈ ನಿಟ್ಟಿನಲ್ಲಿ ಇಂದು 150 ವಕೀಲರನ್ನೊಳಗೊಂಡ ತಂಡ ಧರ್ಮಸ್ಥಳ ಕ್ಷೇತ್ರಕ್ಕೆ ಯಾತ್ರೆ ಹೊರಟಿದೆ.

ಮೈಸೂರು ನಗರದ ಕೋರ್ಟ್ ಅವರಣದಿಂದ ಕಾರುಗಳು ಹಾಗೂ ಎರಡು ಬಸ್ ಗಳ ಮೂಲಕ ವಕೀಲರ ತಂಡ ಹೊರಟಿದ್ದು ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ದರ್ಶನ ಪಡೆಯಲಿದ್ದಾರೆ.
ಆ ಬಳಿಕ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಬೆಂಬಲ ಸೂಚಿಸಿ ಈ ಯಾತ್ರೆ ನಡೆಯುತ್ತಿದೆ.

ಯಾತ್ರೆ ಆರಂಭಕ್ಕೂ ಮುನ್ನ ಎಲ್ಲರೂ ಕೇಸರಿ ಶಾಲು ಧರಿಸಿ, ಕೇಸರಿ ಧ್ವಜ ಹಿಡಿದು ಒಗ್ಗಟ್ಟು ಪ್ರದರ್ಶಿಸಿದರು. ಮಧ್ಯಾಹ್ನದ ವೇಳೆಗೆ ವಕೀಲರ ತಂಡ ಧರ್ಮಸ್ಥಳ ತಲುಪಲಿದೆ.



