ಬೆಂಗಳೂರು: ಟ್ರಕ್, ಕಾರು ಹಾಗೂ ಆಟೋ ನಡುವೆ ಭೀಕರ ಅಪಘಾತ ಸಂಭವಿಸಿ ಡಿಕ್ಕಿಯ ರಭಸಕ್ಕೆ ಆಟೋ ಎರಡು ತುಂಡಾದ ಘಟನೆ ಬೆಂಗಳೂರಿನ ಸುಮ್ಮನಹಳ್ಳಿ ಜಂಕ್ಷನ್ ನಡೆದಿದೆ.
ಘಟನೆಯಲ್ಲಿ ಮೂವರು ಸಾವಿಗೀಡಾಗಿದ್ದು, ಇಬ್ಬರ ಸ್ಥಿತಿ ಗಂಭಿರವಾಗಿದೆ ಎಂದು ತಿಳಿದು ಬಂದಿದೆ. ಮೃತರನ್ನು ಆಟೋದಲಿದ್ದ ಯೇಸು.ಡಿ ಮತ್ತು ಜೆನ್ನಿಫರ್ ಎಂದು ಗುರುತಿಸಲಾಗಿದ್ದು ಇನ್ನೊಬ್ಬರ ಗುರುತು ಪತ್ತೆಯಾಗಬೇಕಿದೆ.

ಅಡ್ಡದಾರಿಯಿಂದ ಬಂದ ಟ್ರಕ್ ಸುಮ್ಮನಹಳ್ಳಿ ರಸ್ತೆಗೆ ಇಳಿದಾಗ ಬ್ರೇಕ್ ಫೇಲ್ ಆಗಿ ಮುಂದೆ ಇದ್ದ ಆಟೋ ಮತ್ತು ಕಾರಿಗೆ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮತ್ತಿಬ್ಬರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.



