Breaking
27 Sep 2026, Sun

ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯಿದೆ ಬಳಕೆಗೆ ಜನಾಕ್ರೋಶ :ಪ್ರಭಾಕರ ಪ್ರಭು.

ಬಂಟ್ವಾಳ : ವರುಷದ ಹಿಂದಿನ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭಜರಂಗದಳ ಮುಖಂಡರಾದ ಭರತ್ ಕುಮ್ದಲ್ ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಕೊಲೆ ಆರೋಪ ಹೋರಿಸಿ ಕೊಲೆ ಪ್ರಕರಣವನ್ನು ದಾಖಲಿಸಿ ಸುಮಾರು 23 ಹಿಂದೂ ಕಾರ್ಯಕರ್ತರನ್ನು ಅನುಮಾನದ ದೃಷ್ಟಿಯಲ್ಲಿ ಬಂಧಿಸಿ, ಪ್ರಕರಣ ದಾಖಲಿಸಿ ನ್ಯಾಯಾಲಯದ ಆದೇಶದಂತೆ ರಾಜ್ಯದ ವಿವಿಧ ಕಾರಗೃಹದಲ್ಲಿ ಶಿಕ್ಷೆ ಅನುಭವಿಸಿಕೊಂಡು ನಂತರ ನ್ಯಾಯಾಲಯದಲ್ಲಿ ಜಾಮೀನು ಪ್ರಕಟಗೊಂಡ ಬೆನ್ನಲ್ಲೇ ಇವರೆಲ್ಲರ ಮೇಲೆ ಮತ್ತೊಮ್ಮೆ ಪೊಲೀಸ್ ಮೂಲಕ ಗೂಂಡಾ ಕಾಯ್ದೆ ಹೇರಿಕೆ ಮಾಡಿ ಮತ್ತೇ ಬಂಧನದ ಭೀತಿಗೆ ಒಳಪಡಿಸಿದ ಪೊಲೀಸ್ ಪ್ರಕ್ರಿಯೆ ಮೇಲೆ ಹಿಂದೂ ಸಮಾಜದ ಎಲ್ಲರಿಗೂ ತುಂಬಾ ನೋವು ತಂದಿರುವ ವಿಚಾರವಾಗಿದ್ದು ಕರಾವಳಿಯ ಇಡೀ ಹಿಂದೂ ಸಮುದಾಯದಲ್ಲಿ ಜನಾಕ್ರೋಶ ಮುಗಿಬಿದ್ದಿದೆ.

ಈ ನಡುವೆ ಹಳೆಯ ಕೊಲೆ ಪ್ರಕರಣದಲ್ಲಿರುವ ಆರೋಪಿಯೊಂದಿಗೆ ವರ್ಷದ ಹಿಂದೆ ಮಾತನಾಡಿರುವುದ್ದಾರೆ ಎಂಬ ನೆಪವಾಗಿಟ್ಟುಕೊಂಡು ಕರ್ನಾಟಕದ ಹಿಂದೂ ಹುಲಿ ಎಂದೇ ಪ್ರಖ್ಯಾತಿ ಹೊಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಕಲ್ಲಡ್ಕ ಪ್ರಭಾಕರ ಭಟ್ ರವರನ್ನು ವಿಚಾರಣೆ ಸಲುವಾಗಿ ಪೊಲೀಸರು ನೋಟೀಸ್ ನೀಡಿರುವುದು ಅಕ್ಷಮ್ಯ ಅಸಂಬದ್ಧವಾಗಿದ್ದು ಹಿಂದೂ ಕಾರ್ಯಕರ್ತರನ್ನು ಕೆರಳಿಸುವಂತಾಗಿದೆ.

ಇದರಿಂದಾಗಿ ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ ಹಿಂದೂ ಶಕ್ತಿ ಪ್ರದರ್ಶನ ವಾಗಲಿದ್ದು ಆಡಳಿತ ವ್ಯವಸ್ಥೆಗೆ ಹಿಂದೂ ಕಾರ್ಯಕರ್ತರು ತಕ್ಕ ಪಾಠ ಕಲಿಸಲಿದ್ದಾರೆ ಎಂದೂ ಬಂಟ್ವಾಳ ಬಿಜೆಪಿ ಮುಖಂಡ ಪ್ರಭಾಕರ ಪ್ರಭು ಪತ್ರಿಕಾ ಪ್ರಕಟಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *