Breaking
28 Sep 2026, Mon

ನಾರಾಯಣಗುರುಗಳ ಅದ್ವೈತ ತತ್ವ ಮಾನವ ಸಮಾನತೆಯ ಸಂದೇಶ: ಹರೀಶ್ ಎಸ್. ಕೋಟ್ಯಾನ್

ಬಂಟ್ವಾಳ: “ನಾರಾಯಣಗುರುಗಳು ಪ್ರತಿಪಾದಿಸಿದ ಅದ್ವೈತ ತತ್ವ ಕೇವಲ ವಿಚಾರವಾಗಿ ಉಳಿಯದೆ, ‘ಮಾನವರು ಸಮಾನರು’ ಎಂಬ ಮಾನವೀಯ ಸಂದೇಶವಾಗಿ ಸಮಾಜದಲ್ಲಿ ಅನುಷ್ಠಾನಗೊಂಡಿತು. ಮಾನವ ವಿಚಾರದಲ್ಲಿ ಅತ್ಯುನ್ನತ ಮೌಲ್ಯಗಳನ್ನು ಪ್ರತಿಪಾದಿಸುವುದೇ ಧರ್ಮಗಳ ಮೂಲ ಆಶಯ. ಹಿಂದುಳಿದ ಸಮಾಜದಲ್ಲಿ ಆತ್ಮವಿಶ್ವಾಸ ಹಾಗೂ ಹೋರಾಟದ ಕಿಚ್ಚನ್ನು ಮೂಡಿಸಿ, ಸಾಮಾಜಿಕ ಪರಿವರ್ತನೆಗೆ ದಾರಿ ತೋರಿದ ಮಹಾನ್ ಚಿಂತಕರೇ ನಾರಾಯಣಗುರುಗಳು” ಎಂದು ಉಪನ್ಯಾಸಕ ಹರೀಶ್ ಎಸ್. ಕೋಟ್ಯಾನ್ ಹೇಳಿದರು.


ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆಯುತ್ತಿರುವ ‘ಗುರುತತ್ವವಾಹಿನಿ’ ಮಾಲಿಕೆ-79ರ ಕಾರ್ಯಕ್ರಮವು ಸದಸ್ಯ ಪ್ರಕಾಶ್ ಪೂಂಜಾರೆ ಕೋಡಿ ಅವರ ಮನೆಯಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ನಾಗೇಶ್ ಕೊಂಕಣಪದವು, ಬಂಟ್ವಾಳ ಘಟಕದ ಉಪಾಧ್ಯಕ್ಷ ಹರೀಶ್ ಅಜೆಕಲ, ಕೋಶಾಧಿಕಾರಿ ಪ್ರಜಿತ್ ಅಮೀನ್ ಎರಮಲೆ, ನಿರ್ದೇಶಕರಾದ ನವೀನ್ ಕಾರಜೆ, ಬ್ರಿಜೇಶ್ ಕಂಜತ್ತೂರು, ಅಶ್ವಿನ್ ಅಮೀನ್, ಸದಸ್ಯರಾದ ಪ್ರಶಾಂತ್ ಎರಮಲೆ, ಯೋಗೀಶ್ ಪೂಂಜಾರೆ ಕೋಡಿ, ಸುದೀಪ್ ರಾಯಿ, ನಾರಾಯಣ ಪಲ್ಲಿಕಂಡ, ಉದಯ್ ಮೇನಾಡ್, ಯಶೋಧರ್ ಕಡಂಬಳಿಕೆ, ಭವ್ಯಶ್ರೀ ಪ್ರಜಿತ್ ಹಾಗೂ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರ, ಗಣೇಶ್ ಪೂಂಜಾರೆ ಕೋಡಿ, ನಾಗೇಶ್ ಪೊನ್ನೊಡಿ, ಹರೀಶ್ ಎಸ್. ಕೋಟ್ಯಾನ್, ಶಿವಾನಂದ, ಅರುಣ್ ಮಹಾಕಾಳಿ ಬೆಟ್ಟು ಉಪಸ್ಥಿತರಿದ್ದರು.


ಆತಿಥ್ಯ ವಹಿಸಿದ್ದ ಪ್ರಕಾಶ್ ಪೂಂಜಾರೆ ಕೋಡಿ ಅವರು ಆಗಮಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣ ಗುರುತತ್ವ ಪ್ರಚಾರ-ಅನುಷ್ಠಾನ ನಿರ್ದೇಶಕ ಮಹೇಶ್ ಬೊಳ್ಳಯಿ ಧನ್ಯವಾದ ಅರ್ಪಿಸಿದರು. ಘಟಕದ ಅಧ್ಯಕ್ಷ ಕಿರಣ್ ಪೂಂಜಾರೆ ಕೋಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *