Breaking
20 Sep 2026, Sun

ಆನೆ ಮಾವುತನ ಕೊಲೆ ಪ್ರಕರಣ ಮರು ತನಿಖೆ ಆಗ್ರಹಿಸಿ ಎಸ್‌ಐಟಿಗೆ ದೂರು

ಧರ್ಮಸ್ಥಳ: ಗ್ರಾಮದ ಆನೆ ಮಾವುತ ನಾರಾಯಣ ಹಾಗೂ ತಂಗಿ ಯಮುನಾ ಕೊಲೆ ಕೇಸ್ ಸಂಬಂಧ ಕೊಲೆಯಾಗಿರುವ ನಾರಾಯಣ ಅವರ ಪುತ್ರ ಗಣೇಶ ಹಾಗೂ ಪುತ್ರಿ ಭಾರತಿ ಎಸ್‌ಐಟಿಗೆ ಮತ್ತೆ ದೂರು ನೀಡಿದ್ದಾರೆ.

ಹೈಕೋರ್ಟ್ನಲ್ಲಿ ಕೇಸ್ ಇದ್ದ ಹಿನ್ನೆಲೆಯಲ್ಲಿ ದೂರು ತೆಗೆದುಕೊಳ್ಳಲು ಆಗವುದಿಲ್ಲ ಅಂತ ಎಸ್ ಐಟಿ ಈ ಮೊದಲು ದೂರು ನೀಡಲು ಬಂದಾಗ ಹೇಳಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ನಿಂದ ದೂರು ಹಿಂಪಡೆದು ಮತ್ತೆ ಎಸ್‌ಐಟಿಗೆ ದೂರು ನೀಡಿದ್ದಾರೆ.

2012ರಲ್ಲಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬೂರ್ಜೆ ಎಂಬಲ್ಲಿ ಆನೆ ಮಾವುತ ಹಾಗೂ ಅವರ ಸಹೋದರಿ ಯಮುನಾ ಅವರ ಕೊಲೆ ನಡೆದಿತ್ತು.

Leave a Reply

Your email address will not be published. Required fields are marked *