ಬಂಟ್ವಾಳ: ಕಾಮಾಲೆ ರೋಗಕ್ಕೆ ಯುವಕನೋರ್ವ ಬಲಿಯಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಸಾಣೂರು ಪದವು ನಿವಾಸಿ, ಸಂದೀಪ್ (22) ಮೃತ ಯುವಕನಾಗಿದ್ದಾನೆ.

ಸಂಗಬೆಟ್ಟಿಗೆ ಕೂಲಿ ಕೆಲಸಕ್ಕೆ ಹೋಗಿದ್ದ ಸಂದೀಪ್ ತಲೆ ತಿರುಗಿ ಬಿದ್ದಿದ್ದರು. ಪರಿಣಾಮ ಸೊಂಟಕ್ಕೆ ಏಟಾಗಿದ್ದು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಸೆ.5 ರಂದು ನೋವು ಉಲ್ಬಣಗೊಂಡ ಕಾರಣ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಬಳಿಕ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ವೆನ್ಹಾಕ್‌ಗೆ ಕರೆದೊಯ್ಯುವಂತೆ ಸೂಚಿಸಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.



