Breaking
12 May 2026, Tue

ಕ್ರಿಕೆಟಿಗ, ಉದ್ಯಮಿ ಪ್ರದೀಪ್ ಅಂಬಲಪಾಡಿ ಹೃದಯಾಘಾತದಿಂದ ನಿಧನ

ಉಡುಪಿ: ಕ್ರಿಕೆಟಿಗ , ಉದ್ಯಮಿ ಪ್ರದೀಪ್ ಅಂಬಲಪಾಡಿ (52) ಅವರು ಸೆ.08 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮಲ್ಪೆಯ ಪ್ರಮೋದ್ ಮಧ್ವರಾಜ್ ಒಡೆತನದ ಪೆಟ್ರೋಲ್ ಪಂಪ್ ನಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದ ಇವರು ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು.

ಉಡುಪಿಯ ಕ್ರಿಕೆಟ್ ಪ್ಯಾರಡೈಸ್ ತಂಡದಲ್ಲಿ ಓಪನ್ ಆಗಿ ಮಿಂಚಿದ್ದ ಪ್ರದೀಪ್ ಉತ್ತಮ ಜಿಮ್ ಪಟು ಕೂಡ ಆಗಿದ್ದರು.

ಸ್ನೇಹಜೀವಿಯಾಗಿದ್ದ ಇವರನ್ನು ಸ್ನೇಹಿತರೆಲ್ಲರು ಪ್ರೀತಿಯಿಂದ ಮಾಣಿ ಎಂದೇ ಕರೆಯುತ್ತಿದ್ದರು. ಇವರ ಅಗಲುವಿಕೆಗೆ ಸ್ನೇಹ ಬಳಗ ಕಂಬನಿ ಮಿಡಿದಿದೆ.

Leave a Reply

Your email address will not be published. Required fields are marked *