Breaking
24 Mar 2026, Tue

ಕಲ್ಮಂಜ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷದ ಸಂಘಟನಾ ದೃಷ್ಟಿಯಿಂದ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಶಕ್ತಿಕೇಂದ್ರದ ಕಾರ್ಯಕರ್ತರ ಅಭ್ಯಾಸ ವರ್ಗ ಕಾರ್ಯಕ್ರಮ ಸತ್ಯನಾರಾಯಣ ಭಜನಾ ಮಂದಿರದಲ್ಲಿ ಸೆ.8 ರಂದು ನಡೆಯಿತು.

ಪಕ್ಷದ ಹಿರಿಯ ಕಾರ್ಯಕರ್ತರಾದ ಬಾಲಚಂದ್ರರಾವ್ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ಶಾಸಕರಾದ ಹರೀಶ್ ಪೂಂಜಾರವರು ಉದ್ಘಾಟನಾ ಭಾಷಣ ಜೊತೆಗೆ ಪಕ್ಷ ಸಂಘಟನೆ ಮತ್ತು ಕಾರ್ಯಾಚಟುವಟಿಕೆಯ ಕುರಿತು ವಿಸ್ಕೃತವಾಗಿ ಸಮಾಲೋಚನೆ ನಡೆಸಿದರು. ಶಶಿಧರ್ ಎಂ ಕಲ್ಮಂಜ ಇವರು ಸ್ವಾಗತಿಸಿದರು.

ಪಕ್ಷದ ಪ್ರಮುಖರಾದ ರವಿ ಇಲಂತಿಲ, ಜಯಂತ್ ಕೋಟ್ಯಾನ್ ಮೋಹನ್ ಅಂಡಿಂಜೆ ಬೈಠಕ್ ತೆಗೆದುಕೊಂಡರು. ಕೃಷ್ಣಪ್ಪ ಗುಡಿಗಾರ್ ಸಮಾರೋಪ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮಂಜ ಶಕ್ತಿ ಕೇಂದ್ರ ಪ್ರಭಾರಿ ಶ್ರೀಮತಿ ಪೂರ್ಣಿಮಾ ಜಯಂತ್, ಉಜಿರೆ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಯಶವoತ್ ಗೌಡ ಪುದುವೆಟ್ಟು, ಪ್ರಧಾನ ಕಾರ್ಯದರ್ಶಿ ನಿರಂಜನ್ ಶೆಟ್ಟಿ, ಕಲ್ಮoಜ ಶಕ್ತಿ ಕೇಂದ್ರ ಪ್ರಮುಖ್ ಶ್ರೀಧರ್ ಎಂ ಕಲ್ಮಂಜ, ಹಿರಿಯರಾದ ರವಿ ಭಟ್, ಕೆಂಪಯ್ಯ ಮಡಿವಾಳ, ಕಲ್ಮoಜ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಮಲ,ಉಪಾಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ,ಅನಿಲ್ ಗೌಡ, ಪಕ್ಷದ ಅನ್ಯನ್ಯ ಜವಾಬ್ದಾರಿ ಇರುವ ಪದಾಧಿಕಾರಿಗಳು,ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು, ಬಿಜೆಪಿ ಗೀತೆ ಚೇತನ್ ಗುಡಿಗಾರ್ ಇವರು ಹಾಡಿದರು, ಲೋಹಿತ್ ರವರು ನಿರೂಪಣೆ ಮಾಡಿ ಧನ್ಯವಾದವಿತ್ತರು.

Leave a Reply

Your email address will not be published. Required fields are marked *