Breaking
29 Jun 2026, Mon

1 ಕೊ. ರೂ ಮೌಲ್ಯದ ಅಕ್ರಮ ಪಡಿತರ ಅಕ್ಕಿ ಜಪ್ತಿ: ಇಬ್ಬರ ವಿರುದ್ಧ ಪ್ರಕರಣ ದಾಖಲು

ಯಾದಗಿರಿ: ಜಿಲ್ಲೆಯ ಗುರುಮಠಕಲ್ ಪಟ್ಟಣದ ರೈಸ್‌ಮಿಲ್‌ನಲ್ಲಿ ಸಂಗ್ರಹಿಸಲಾಗಿದ್ದ ಅಕ್ರಮ ಪಡಿತರ ಅಕ್ಕಿ ಜಪ್ತಿ ಹಿನ್ನೆಲೆಯಲ್ಲಿ ಇಬ್ಬರ ಮೇಲೆ ಸೆ.08 ರಂದು ಪ್ರಕರಣ ದಾಖಲಾಗಿದ್ದು, ಒಟ್ಟು 1,17,92 ಕೋಟಿ ರೂ.ಮೌಲ್ಯದ ಸುಮಾರು 4108 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿದ ಘಟನೆ ನಡೆದಿದೆ.

ಲಕ್ಷ್ಮಿ ವೆಂಕಟೇಶ್ವರ ಇಂಡ್ರಸ್ಟಿಜ್‌ನ ಮಾಲಿಕ ನರೆಂದ್ರ ರಾಠೋಡ್ ಮತ್ತು ಅಯ್ಯಪ್ಪ ರಾಠೊಡ್ ಎಂಬುವವರ ಮೇಲೆ ಪ್ರಕರಣ ದಾಖಲಾಗಿದ್ದು, ಈ ಇಬ್ಬರು ಒಳಗೊಂಡಂತೆ ಮಹಾಲಕ್ಷ್ಮಿ, ಬಾಲಾಜಿ ಇಂಡ್ರಸ್ಟಿಜ್‌ನ ಪ್ರಮುಖರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಆಹಾರ ಇಲಾಖೆ ಅಧಿಕಾರಿಗಳು ಆರೋಪಿ ನರೇಂದ್ರ ರಾಠೋಡ್ ಅವರಿಗೆ ಸೇರಿದ ಗುರುಮಠಕಲ್ ಪಟ್ಟಣದ ವಿವಿಧ ರೈಸ್ ಮಿಲ್, ಗೊದಾಮಗಳ ಮೇಲೆ ದಾಳಿ ಇಟ್ಟು ಕಾರ್ಯಾಚರಣೆ ನಡೆಸಿದ್ದಾರೆ.

ಈ ವೇಳೆ ರಾಜ್ಯ ಸೇರಿದಂತೆ ಅನ್ಯ ರಾಜ್ಯಗಳಿಂದ ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸಿ ಇಲ್ಲಿ ತಂದು ಪಾಲಿಶ್ ಮಾಡಿ ವಿವಿಧ ಹೆಸರುಗಳ ಲೇಬಲ್ ಲಗತ್ತಿಸಿ 25 ರಿಂದ 50 ಕೆಜಿ ತೂಕದ ಚೀಲಗಳಲ್ಲಿ ಶೇಖರಿಸಿ ಮಾರಾಟ ಮಾಡುವ ವ್ಯವಸ್ಥಿತ ಕೆಲಸ ನಡೆಯುತ್ತಿತ್ತು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

Leave a Reply

Your email address will not be published. Required fields are marked *