Breaking
29 Jun 2026, Mon

ಕೇರಳದ ಮನಾಫ್, ಯ್ಯೂಟ್ಯೂಬರ್ ಅಭಿಷೇಕ್ ಎಸ್‌ಐಟಿ ವಿಚಾರಣೆಗೆ ಹಾಜರ್

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣ ವಿಚಾರದಲ್ಲಿ ಮನಾಫ್ ಜತೆಗೆ ಯ್ಯೂಟ್ಯೂಬರ್ ಅಭಿಷೇಕ್ ಕೂಡ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

ಧರ್ಮಸ್ಥಳ ಪ್ರಕರಣ ವಿಚಾರ ಕೇರಳದಲ್ಲಿ ಯ್ಯೂಟ್ಯೂಬ್ ಮೂಲಕ ಸುದ್ದಿ ಹಂಚಿದ ವಿಚಾರವಾಗಿ ಮನಾಫ್ ಗೆ ಎಸ್‌ಐಟಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿತ್ತು. ಅದರಂತೆ ಮಧ್ಯಾಹ್ನ ಇಬ್ಬರು ಕೂಡ ವಿಚಾರಣೆಗಾಗಿ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ವಿಚಾರಣೆಗಾಗಿ ಹಾಜರಾಗಿದ್ದಾರೆ.

ಇದಕ್ಕೂ ಮೊದಲು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಎಸ್‌ಐಟಿ ನೋಟಿಸ್ ನೀಡಿದಂತೆ ಹಾಜರಾಗಲಿದ್ದೇವೆ. ಸತ್ಯಾಸತ್ಯೆ ಬಗ್ಗೆ ಎಸ್‌ಐಟಿ ತನಿಖೆ ನಡೆಸಿಲಿದೆ. ಅವರ ಯಾವುದೇ ಪ್ರಶ್ನೆಗೆ ನಾವು ಉತ್ತರ ನೀಡಲಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಈ ವೇಳೆ ಮನಾಫ್ ಜತೆಗೆ ಕೇರಳ ಮಾನವ ಹಕ್ಕುಗಳ ಆಯೋಗದ ಸದಸ್ಯರು ಜೊತೆಗಿದ್ದರು.

Leave a Reply

Your email address will not be published. Required fields are marked *