Breaking
12 May 2026, Tue

ಬೆಳುವಾಯಿಯಲ್ಲಿ ಚಿರತೆ ದಾಳಿಗೆ ದನ ಬಲಿ

ಮೂಡುಬಿದಿರೆ: ಚಿರತೆ ದಾಳಿಗೆ ದನವೊಂದು ಬಲಿಯಾದ ಘಟನೆ ಮೂಡಬಿದ್ರೆ ತಾಲೂಕಿನಲ್ಲಿ ಬೆಳುವಾಯಿಯಲ್ಲಿ ನಡೆದಿದೆ.

ಬೆಳುವಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7ನೇ ವಾರ್ಡಿನ ವಠಾರದಲ್ಲಿ ಮತಿನ್ ಸಾಹೇಬರಿಗೆ ಸೇರಿದ ದನವನ್ನು ಚಿರತೆ ದಾಳಿ ಮಾಡಿ ಕೊಂದಿದೆ.

ಇದರಿಂದಾಗಿ ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ಮನೆ ಮಾಡಿದ್ದು, ಸಮಸ್ಯೆ ಪರಿಹರಿಸುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *