Breaking
24 Jun 2026, Wed

ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘ ಸ್ಥಾಪನೆ : ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ: ದಕ್ಷಿಣಕನ್ನಡ ಜಿಲ್ಲಾ ಬಾರ್ ಅಸೋಸಿಯೇಷನ್/ವಕೀಲರ ಸಂಘ ಸ್ಥಾಪಿಸಿ ಪದಾಧಿಕಾರಿಗಳ ಆಯ್ಕೆ ಮಾಡುವ ಸಭೆಯು ಇಂದು(ಸೆ. 4) ಬಿ.ಸಿ.ರೋಡಿನ ಹೋಟೆಲ್ ಕೃಷ್ಣಿಮಾದ ಕಾನ್ಸರೆನ್ಸ್ ಹಾಲ್‌ನಲ್ಲಿ ನಡೆಯಿತು.

ನಮ್ಮ ದಕ್ಷಿಣಕನ್ನಡ ಜಿಲ್ಲಾ ವ್ಯಾಪ್ತಿಗೊಳಪಟ್ಟ ಮಂಗಳೂರು, ಮೂಡಬಿದ್ರಿ, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಮತ್ತು ಸುಳ್ಯ ವಕೀಲರ ಸಂಘಗಳ,ಅದರ ಸದಸ್ಯರುಗಳ ವಿವಿಧ ಅಗತ್ಯತೆ, ಬೇಡಿಕೆಗಳನ್ನು ಕಾಲಕಾಲಕ್ಕೆ ಪೂರೈಸಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಯೋಜನೆಗಳ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತ ಗೊಳಿಸುವಲ್ಲಿ, ವಕೀಲ ವೃಂದದ ಶ್ರೇಯೋಭಿವೃದ್ಧಿಗಾಗಿ ಸಂಘಟಿತ ಹೋರಾಟ ಮಾಡುವಲ್ಲಿ ವೃತ್ತಿ ಗೌರವವನ ಕಾಪಾಡಿಕೊಳ್ಳುವಲ್ಲಿ, ದ.ಕ ಜಿಲ್ಲಾ ವಕೀಲರ ಸಂಘಗಳ ಪಧಾಧಿಕಾರಿಗಳೊಳಗೆ, ಸದಸ್ಯರೊಳಗೆ ಸಮನ್ವಯ ಸಾಧಿಸುವ ಸದುದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘವೊಂದನ್ನು ಸ್ಥಾಪಿಸುವ ಅಗತ್ಯತೆಯನ್ನು ಕಂಡುಕೊಂಡ ನಾವುಗಳು ಈ ನಿಟ್ಟಿನಲ್ಲಿ ಚರ್ಚೆ ನಡೆಸಿ, ವಿಚಾರ ವಿಮರ್ಶೆ ಮಾಡಿ ಸಂಘ ರಚಿಸಿ ಎಲ್ಲಾ ಆರು ವಕೀಲರ ಸಂಘಗಳಿಗೆ ಪ್ರತಿನಿಧಿಯನ್ನು ನೀಡಿ ಆರು ಪದಾಧಿಕಾರಿಗಳನ್ನು (ಅಧ್ಯಕ್ಷರು, ಎರಡು ಉಪಾಧ್ಯಕ್ಷರು, ಕಾರ್ಯದರ್ಶಿ, ಜೊತೆಕಾರ್ಯದರ್ಶಿ, ಕೋಶಾಧಿಕಾರಿ) ಯನ್ನು ಆಯ್ಕೆ ಮಾಡಲಾಯಿತು.

ಈ ಸಭೆಯಲ್ಲಿ ಪ್ರತಿಯೊಂದು ವಕೀಲರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು, ಕಾರ್ಯದರ್ಶಿ, ಜೊತೆ ಕಾರ್ಯದರ್ಶಿ, ಖಜಾಂಚಿಯವರು ಖುದ್ದು ಹಾಜರಿದ್ದು ಸೂಕ್ತ ಚರ್ಚೆಯಲ್ಲಿ ಭಾಗವಹಿಸಿ ಉಪಯುಕ್ತ ಪದಾಧಿಕಾರಿಗಳನ್ನು ಚುನಾಯಿಸಿದರು.

Leave a Reply

Your email address will not be published. Required fields are marked *