Breaking
25 Sep 2026, Fri

ಉಪ್ಪಿನಂಗಡಿಯಲ್ಲಿ ಗಬ್ಬದ ದನ ಕದ್ದು ಮಾಲಿಕನ ತೋಟದಲ್ಲೇ ಮಾಂಸ ಮಾಡಿ ಪರಾರಿಯಾದ ಗೋ ಕಳ್ಳರು

ಉಪ್ಪಿನಂಗಡಿ: ಹಟ್ಟಿಯಿಂದಲೇ ಗಬ್ಬದ ದನವನ್ನು ಕಳವು ಮಾಡಿ, ಅದನ್ನು ಮಾಲಕನ ತೋಟದಲ್ಲೇ ಕೊಂದು ಮಾಂಸ ಮಾಡಿ ಉಳಿದ ಭಾಗವನ್ನು ಬಿಟ್ಟು ಪರಾರಿಯಾದ ಘಟನೆ ಉಪ್ಪಿನಂಗಡಿಯ ಪೆರ್ನೆ ಸಮೀಪದ ಕಡಂಬು ಗ್ರಾಮದಲ್ಲಿ ನಡೆದಿದೆ.

ಕಡಂಬು ನಿವಾಸಿ ದೇಜಪ್ಪ ಮೂಲ್ಯ ಅವರ ಹಟ್ಟಿಯಲ್ಲಿ ಸಾಕಿದ್ದ ಎರಡು ವರ್ಷದ ಗಬ್ಬದ ದನವು ಕಳೆದ ರಾತ್ರಿ ಕಾಣೆಯಾಗಿತ್ತು. ಸೆ.4ರ ದನ ಹಟ್ಟಿಯಲ್ಲಿ ಕಾಣೆಯಾಗಿತ್ತು. ಮನೆಯವರು ಹುಡುಕಾಟ ನಡೆಸಿದಾಗ ಅವರ ತೋಟದಲ್ಲೇ ದನವನ್ನು ಕೊಂದು ಮಾಂಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳು ಅಲ್ಲಿಯೇ ದನದ ಚರ್ಮ ಹಾಗೂ ಇತರೆ ಅವಶೇಷಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *