Breaking
24 Jun 2026, Wed

ಯೂಟ್ಯೂಬರ್ ಸಮೀರ್.ಎಂ.ಡಿಯ ಬೆಂಗಳೂರಿನ ಮನೆಗೆ ಬೆಳ್ತಂಗಡಿ ಪೊಲೀಸರ ದಾಳಿ

ಬೆಂಗಳೂರು : ಯೂಟ್ಯೂಬರ್ ಸಮೀರ್.ಎಂ.ಡಿಯ ಬೆಂಗಳೂರಿನ ಬನ್ನೇರು ಘಟ್ಟದಲ್ಲಿರುವ ಹುಳ್ಳ ಹಲ್ಲಿಯಲ್ಲಿರುವ ಬಾಡಿಗೆ ಮನೆಗೆ ಬೆಳ್ತಂಗಡಿ ಪೊಲೀಸರು ಸೆ.3 ರಂದು ಮಧ್ಯಾಹ್ನದ ವೇಳೆ ದಾಳಿ ನಡೆಸಿದ್ದಾರೆ.

ಎಐ ವಿಡಿಯೋ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆಗೆ ಸಮೀರ್ ಅವರು ಪೊಲೀಸರಿಗೆ ಸರಿಯಾಗಿ ತನಿಖೆಗೆ ಸಹಕರಿಸದ ಹಿನ್ನಲೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಮತ್ತು ತಂಡ ಎಫ್.ಎಸ್.ಎಲ್ ವಿಭಾಗದ ಸೋಕೊ ಸಿಬ್ಬಂದಿ ಜೊತೆಯಲ್ಲಿ ಮಧ್ಯಾಹ್ನ1:40 ಕ್ಕೆ ಸರ್ಚ್ ವಾರಂಟ್ ಪಡೆದು ದಾಳಿ ನಡೆಸಿದ್ದಾರೆ.

ಪ್ರಕರಣದಲ್ಲಿ ವಿಡಿಯೋ ಮಾಡಲು ಬಳಸಿದ ಕಂಪ್ಯೂಟರ್ ಮತ್ತು ಮೊಬೈಲ್ ಫೋನ್ ಆತನ ಮನೆಯಿಂದ ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *