Breaking
25 Sep 2026, Fri

ಶವಗಳನ್ನು ಹೊತಿಟ್ಟ ಪ್ರಕರಣದ ಆರೋಪಿ ಚಿನ್ನಯ್ಯ ಮತ್ತೆ ಎಸ್.ಐ.ಟಿ ಕಸ್ಟಡಿಗೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೊತಿಟ್ಟ ಪ್ರಕರಣದ ಆರೋಪಿ ಚಿನ್ನಯ್ಯನನ್ನು ಮತ್ತೆ ನ್ಯಾಯಾಲಯ ಇದೀಗ ಮತ್ತೆ ಮೂರು ದಿನಗಳ ಕಾಲ ಎಸ್.ಐ.ಟಿ ಕಸ್ಟಡಿಗೆ ನೀಡಿದೆ.

ಈ ಪ್ರಕರಣದಲ್ಲಿ ಆಗಸ್ಟ್.23 ರಂದು ಚಿನ್ನಯ್ಯನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಎಸ್ಐಟಿ ಅಧಿಕಾರಿಗಳು 10 ದಿನಗಳ ಕಾಲ ವಿಚಾರ ನಡೆಸಿದ್ದರು. ಇದೀಗ ಮತ್ತೆ ಮತ್ತಷ್ಟು ತನಿಕೆ ಕಾರ್ಯ ಮತ್ತು ಮಹಜರು ಕಾರ್ಯ ಬಾಕಿಯಿರುವುದರಿಂದ ಸೆ.3ರಂದು ಮತ್ತೆ ಮೂರು ದಿನಗಳ ಕಾಲ ಕಸ್ಟಡಿಗೆ ಕೇಳಿಕೊಂಡಿದೆ.

ಹೀಗಾಗಿ ಮತ್ತೆ ಮೂರು ದಿನಗಳ ಕಾಲ ಎಸ್.ಐ.ಟಿ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ.

Leave a Reply

Your email address will not be published. Required fields are marked *