Breaking
23 Mar 2026, Mon

ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಅಪಮಾನ ಬೃಹತ್ ಜನಾಗ್ರಹ ಸಭೆ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಈಗಾಗಲೇ ಅಪಪ್ರಚಾರ ಇರುವುದರಿಂದ ನೈಜ ಸಂಗತಿ ಹೊರಬರಲು ಈಗಾಗಲೇ ಎಸ್ಐಟಿ ತನಿಖೆ ಒಳಪಡಿಸಿದಂತೆ ಎನ್ಐಎ ತನಿಖೆಗೂ ಒಳಪಡಿಸಬೇಕು, ಈಗಾಗಲೇ ಜನರಲ್ಲಿ ಕ್ಷೇತ್ರದ ಕುರಿತು ನಕಾರಾತ್ಮಕ ಚಿಂತನೆಗಳಿದ್ದು, ಅವುಗಳನ್ನು ತಮ್ಮ ಮನಸ್ಸಿನಿಂದ ತೆಗೆದು ಹಾಕಬೇಕು, ಸೌಜನ್ಯ ಅತ್ಯಾಚಾರ ಆಗಿರುವುದಂತೂ ನಿಜ ಸೌಜನ್ಯಗಳಿಗೆ ನ್ಯಾಯ ದೊಕಿಸುವ ಕೆಲಸ ಆಗಬೇಕು ಮುಂತಾದ ಆಗ್ರಹಗಳು ಕೇಳಿ ಬಂದವು.

ಇದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನಲ್ಲಿ ಪುತ್ತೂರು ತಾಲೂಕು ಶ್ರೀ ಧರ್ಮಸ್ಥಳ ಸಂರಕ್ಷಣಾ ವೇದಿಕೆ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನವನ್ನು ಖಂಡಿಸಿ ಸೋಮವಾರ ನಡೆದ ಜನಾಗ್ರಹ ಸಭೆಯಲ್ಲಿ ಕೇಳಿ ಜನಪ್ರತಿನಿಧಿಗಳಿಂದ ಕೇಳಿದ ಬಂದ ಮಾತುಗಳು

ಜನಾಗ್ರಹ ಸಭಾ ವೇದಿಕೆ ತಾಲೂಕಿನ ವಿವಿಧ ದೇವಸ್ಥಾನಗಳ ಮುಖ್ಯಸ್ಥರು, ವಿವಿಧ ಹಿಂದೂ ಸಂಘಟನೆಗಳ ಮುಖ್ಯಸ್ಥರು, ಮತ್ತಿತರ ಸಂಘಟನೆಗಳ ಪ್ರಮುಖರು, ರಾಜಕೀಯ ವ್ಯಕ್ತಿಗಳಿಂದ ಕೂಡಿತ್ತು. ಸಭಾಂಗಣದಲ್ಲಿ ತಾಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ನೆರೆದಿದ್ದರು.

ಆನಾಗ್ರಹ ಸಭೆ ನಡೆಯುವ ಮೊದಲು ನೇತೃತ್ವ ವಹಿಸಿದ್ದವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತುಪ್ಪದ ದೀಪ ಉರಿಸಿ ಪ್ರಾರ್ಥನೆ ಮಾಡಿದರು. ಬಳಿಕ ರಮೇಶ್ ರೈ ನೇತೃತ್ವದಲ್ಲಿ ಸುಮಾರು 28 ಭಜನಾ ತಂಡಗಳ ಸದಸ್ಯರು ವೇದಿಕೆ ಎದುರು ಕುಣಿತ ಭಜನೆ ನೆರವೇರಿಸಿದರು.

ಬಳಿಕ ಸಭಾ ಕಾರ್ಯಕ್ರಮದಲ್ಲಿ ಜನಾಗ್ರಹ ಸಭೆಯನ್ನುದ್ದೇಶಿಸಿ ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀನಿ ದಿಕ್ಸೂಚಿ ಭಾಷಣ ಮಾಡಿ, ಪ್ರಸ್ತುತ ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಅಪಪ್ರಚಾರಗಳು ಕೇಳಿ ಬರುತ್ತಿದ್ದು, ಒಂದು ಕ್ಷೇತ್ರವನ್ನು ಬಲಿಗೊಡಲು ಹೊರಿಟಿದ್ದೇವೆ. ಕಣ್ಣಿಲ್ಲದ ಕಣ್ಣು, ಕೈಗಳಿಲ್ಲದ ಕೈಗಳನ್ನು ಸೃಷ್ಟಿ ಮಾಡಿ ನಾವು ಬದುಕುತ್ತಿದ್ದೇವೆ. ಈ ನಿಟ್ಟಿನಲ್ಲಿ ನಾವು ಬಿಡಬೇಕಾದ್ದು ನಮ್ಮ ಮೇಲಿನ ಸಂಶಯಗಳನ್ನು. ತಲೆ ತಲಾಂತರಗಳಿಂದ ಶ್ರೀ ಮಂಜುನಾಥ, ಅಣ್ಣಪ್ಪ ಸ್ವಾಮಿ ಇದ್ದಾನೆ. ಅದನ್ನು ಸುಳ್ಳು ಮಾಡಲು ಹೊರಟಿರುವುದು ಷಡ್ಯಂತ್ರವಾಗಿದೆ. ಸಮಾಜದಲ್ಲಿ ನಂಬಿಕೆ ಇಲ್ಲದವರ ನಡುವೆ ಇದ್ದು ಅವರ ಮಾತುಗಳನ್ನು ಕೇಳಿ ನಾವು ಬದುಕುತ್ತಿರುವುದು ನಾಚಿಕೆಗೇಡಿನ ಜೀವನ. ಈ ನಿಟ್ಟಿನಲ್ಲಿ ಕ್ಷೇತ್ರ ಉಳಿಸುವಲ್ಲಿ, ಧರ್ಮ ಬೆಳೆಸುವಲ್ಲಿ ಏಕಸ್ತರಾಗಿ ಇರೋಣ. ಜಾಗತಿಕ ಸಮಾಜ ನಿರ್ಮಾಣವಾಗಬೇಕು ಎಂದು ನುಡಿದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕೆಟ್ಟವರಿಗೆ ಒಳ್ಳೆ ಬುದ್ಧಿ ನೀಡಿ ಎಂಬುದಕ್ಕೆ ಜನಾಗ್ರಹ ಸಭೆ, ಧರ್ಮಸ್ಥಳದ ಪರ ನಾವಿದ್ದೇವೆ ಎಂಬುದಕ್ಕೆ ಜನಾಗ್ರಹ ಸಭೆ, ಶ್ರೀ ಕ್ಷೇತ್ರ ಧರ್ಮಸ್ಥಳ ಆದಾಯಕ್ಕಿರುವ ದೇವಸ್ಥಾನವಲ್ಲ. ಬದಲಾಗಿ ಒಂದು ಸರಕಾರ ಮಾಡದ ಕೇಲಸವನ್ನು ಶೈಕ್ಷಣಿಕವಾಗಿ, ವ್ಯಸನಮುಕ್ತ ಸಮಾಜ ನಿರ್ಮಾಣದ ಮೂಲಕ ಮಾಡುತ್ತಿದೆ. ಇದೀಗ ಧರ್ಮಸ್ಥಳದ ಕುರಿತು ನಡೆದಿರುವುದು ವೈಚಾರಿಕ ದಾಳಿ. ಕ್ಷೇತ್ರ ಎಲ್ಲಾ ಅಪಮಾನಗಳಿಂದ ಮುಕ್ತವಾಗಿ ಮುಂದಿನ ಕೆಲಸವೇ ತಿಂಗಳುಗಳಲ್ಲಿ ಮತ್ತೆ ಎದ್ದು ನಿಲ್ಲುತ್ತೆ ಎಂದ ಅವರು, ಜಿಹಾದಿ ಷಡ್ಯಂತ್ರಕ್ಕೆ ಒಳಗಾಗಿರುವ ಮನೋಸ್ಥಿತಿಯವರಿಗೆ ಶ್ರೀ ಕ್ಷೇತ್ರ ಸರಕಾರಿಕರಣವಾಗಬೇಕು, ಭಕ್ತ ಸಂಖ್ಯೆ ಕಡಿಮೆಯಾಗಬೇಕು, ವೀರೇಂದ್ರ ಹೆಗ್ಗಡೆಯವರನ್ನು ಕೆಳಗಿಳಿಸಬೇಕು ಎಂಬ ಮನೋಭಾವನೆಯಿಂದ ಇಷ್ಟೆಲ್ಲಾ ಅಪಮಾನ ಮಾಡುತ್ತಿದ್ದಾರೆ. ಇದಕ್ಕೆ ನಾವು ಯಾವತ್ತೂ ಎಡೆಮಾಡಿಕೊಡುವುದಿಲ್ಲ ಎಂದರು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಇಂದು ಹಳ್ಳಿ ಹಳ್ಳಿಗಳಲ್ಲಿ ಆರ್ಥಿಕ ಬಲದ ಜತೆ, ಧೈರ್ಯದಿಂದ ಮೈಕ್ ಹಿಡಿದು ಮಾತನಾಡಲು ಕಲಿಸಿದ್ದರೆ ಪುಣ್ಯ ಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳ. ಕುಡುಕನಿಗೆ ಮಾನವನಾಗಿ ಬದುಕಲು ಕಲ್ಪಿಸಿದ್ದೆ ಶ್ರೀ ಕ್ಷೇತ್ರ. ಆದರೆ ಇತ್ತೀಚಿನ ಷಡ್ಯಂತ್ರದ ಕುರಿತು ಜನರಲ್ಲಿ ಗೊಂದಲ ಉಂಟಾಗಿದೆ. ಸಾಮಾಜಿಕ ಜಾಲತಾಣ ಮತ್ತಷ್ಟು ಗೊಂದಲ ಉಂಟು ಮಾಡಿದೆ. ಇದಕ್ಕೆ ಮನುಷ್ಯನಲ್ಲಿರುವ ನಂಜಿ ಕಾರಣ ಎಂದ ಅವರು, ಇದೀಗ ಎಸ್ಐಟಿ ಯಿಂದ ಎಲ್ಲರ ಮನಸ್ಸಿನಲ್ಲಿರುವ ಗೊಂದಲವನ್ನು ತೆಗೆಯುವ ಹಾಗೆ ಆಗಿದೆ. ಆದರೆ ಸೌಜನ್ಯಳ ಅತ್ಯಾಚಾರ ಆಗಿದೆ. ಅವಳ ಕುಟುಂಬಕ್ಕೆ ನ್ಯಾಯ ಒದಗಿಸಬೇಕಾಗಿದೆ. ಕಾನೂನು ಪ್ರಕಾರ ಶಿಕ್ಷೆ ಆಗಬೇಕಾಗಿದೆ ಎಂದರು.

ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿ ವೇದಿಕೆ ವತಿಯಿಂದ ಪುತ್ತೂರು ತಹಶೀಲ್ದಾರ್ ಮೂಲಕ ರಾಜ್ಯಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ವೇದಿಕೆಯಲ್ಲಿ ಜನಾಗ್ರಹ ಸಭೆ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು, ಮಾಜಿ ಶಾಸಕ ಸಂಜೀವ ಮಠಂದೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ನಗರಸಭೆ ಸದಸ್ಯ ಜೀವಂಧರ್ ಜೈನ್, ಹಿರಿಯ ಹಿಂದೂ ಮುಖಂಡ ಡಾ. ಪ್ರಸಾದ್ ಭಂಡಾರಿ, ನ್ಯಾಯವಾದಿ ನಿರ್ಮಲ್ ಕುಮಾರ್ ಜೈನ್, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಆಡಳಿತಾಧಿಕಾರಿ ಅಶ್ವಿನಿ ಎಲ್ ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯ ಮಲ್ಲಿಕಾ ಪಕ್ಕಳ, ಮಂಗಳೂರು ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಆರ್.ಸಿ.ನಾರಾಯಣ, ಸೀತಾರಾಮ ರೈ ಕೆದಂಬಾಡಿಗುತ್ತು, ಡಾ.ಸುರೇಶ್ ಪುತ್ತೂರಾಯ, ಯು.ಪೂವಪ್ಪ, ವಿಶ್ವೇಶ್ವರ ಭಟ್ ಬಂಗಾರಡ್ಕ, ನ್ಯಾಯವಾದಿ ಕೇಶವ ಗೌಡ ಧರ್ಮಸ್ಥಳ, ಪದ್ಮನಾಭ ಶೆಟ್ಟಿ, ಸಾಜ ರಾಧಾಕೃಷ್ಣ ಆಳ್ವ, ರವೀಂದ್ರನಾಥ ಶೆಟ್ಟಿ ನುಳಿಯಾಲು, ಕೃಷ್ಣಪ್ರಸಾದ್ ಆಳ್ವ, ಪಿ.ಬಿ.ಶಿವಕುಮಾರ್, ಚಂದ್ರಶೇಖರ ಬಪ್ಪಳಿಗೆ, ನನ್ಯ ಅಚ್ಯುತ ಮೂಡೆತ್ತಾಯ, ಬೂಡಿಯಾರು ರಾಧಾಕೃಷ್ಣ ರೈ, ಲೋಕೇಶ್ ಹೆಗ್ಡೆ, ಮಾರಪ್ಪ ಶೆಟ್ಟಿ, ಶ್ರೀಕೃಷ್ಣ ಬೊಳ್ಳಿಲ್ಲಾಯ, ಅಶೋಕ್ ಪಡಿವಾಳ್, ಗೌರಿ ಬನ್ನೂರು, ಸುಭಾಶ್ ರೈ, ವಿನಯ ಸುವರ್ಣ, ಮುರಳೀಧರ ಹಸಂತಡ್ಕ, ಎ.ಕೆ.ಜಯರಾಮ ರೈ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ವಿಠಲ ರೈ ಬಾಲ್ಯೊಟ್ಟು, ನವೀನ್ ಕುಮಾರ್, ಅಜಿತ್ ಕುಮಾರ್ ಜೈನ್, ವಿ.ಕೆ.ಜೈನ್, ನರೇಂದ್ರ ಪಡಿವಾಳ್, ರಾಧಾಕೃಷ್ಣ ನಾಕ್, ಕೃಷ್ಣವೇಣಿ, ಉದಯ ಕುಮಾರ್, ಬಲರಾಮ ಆಚಾರ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *