Breaking
23 Mar 2026, Mon

ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ 2 ಹಂತದ ವಿಚಾರಣೆ

ಬೆಳ್ತಂಗಡಿ: ಬುರುಡೆ ಪ್ರಕರಣದಲ್ಲಿ ಆರೋಪಿಯಾಗಿ ಎಸ್ಐಟಿಯ ವಶದಲ್ಲಿರುವ ಚಿನ್ನಯ್ಯನನ್ನು ಬೆಂಗಳೂರಿನಲ್ಲಿ ಸ್ಥಳ ಮಹಜರು ನಡೆಸಿದ ಬಳಿಕ ಮತ್ತೆ ಬೆಳ್ತಂಗಡಿಗೆ ಕರೆತರಲಾಗಿದೆ.

ಭಾನುವಾರ ರಾತ್ರಿ 9.15ರ ಸುಮಾರಿಗೆ ಬೆಳ್ತಂಗಡಿಗೆ ಅಧಿಕಾರಿಗಳು ತಲುಪಿದ್ದಾರೆ. ಇಂದು ಎರಡನೇ ಹಂತದ ವಿಚಾರಣೆ ಆರಂಭವಾಗಲಿದೆ.

ಆ.30ರಂದು ಬೆಳಗ್ಗೆ 6 ಗಂಟೆಗೆ ಚಿನ್ನಯ್ಯನನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ ಎಸ್ಐಟಿ ಈತನಿಗೆ ಆಶ್ರಯ ನೀಡಿದ್ದ ಜಯಂತ್ ಟಿ. ಮತ್ತು ಮಟ್ಟಣ್ಣನವರ್ ಮನೆಯಲ್ಲಿ ಶೋಧ ಕಾರ್ಯ ನಡೆಸಿತ್ತು.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಜಯಂತ್ ಅವರು ಎಸ್ಐಟಿ ಶೋಧ ನಡೆಸುತ್ತಿರುವುದನ್ನು ಒಪ್ಪುತ್ತೇನೆ. ನಮ್ಮ ಮನೆಯವರು ಎಲ್ಲ ವಿಚಾರಗಳನ್ನು ಎಸ್ಐಟಿಗೆ ತಿಳಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *