ಸಾರ್ವಜನಿಕ ಶ್ರೀ ಶಾರದೊತ್ಸವ ಆಚರಣಾ ಸಮಿತಿ ಸಿದ್ದಕಟ್ಟೆ ಇದರ ಅಧ್ಯಕ್ಷರಾದ ಶ್ರೀ ಮಹಾವೀರ ಜೈನ್ ನೇತೃತ್ವದಲ್ಲಿ ಎರಡನೇ ಪೂರ್ವಬಾವಿ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಸಭೆ ನಡೆಯಿತು,
ಈ ಸಭೆಯಲ್ಲಿ ಸಮಿತಿಯ ಗೌರವ ಅಧ್ಯಕ್ಷರಾದ ಶ್ರಿ ಬಿ. ರಮಾನಾಥ ರೈಯವರು ಆರನೇ ವರ್ಷದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ಚರ್ಚಿಸಿದರು.
ಪ್ರಧಾನ ಸಂಚಾಲಕರಾದ ಶ್ರೀ ಜಗದೀಶ್ ಕೊಯಿಲ ಕಾರ್ಯಕ್ರಮದ ಕುಂದು ಕೊರತೆಗಳು ಬಾರದಂತೆ ಸವಿಸ್ತಾರವಾಗಿ ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು.
ಅಧ್ಯಕ್ಷರಾದ ಮಹಾವೀರ್ ಜೈನ್ ನಡ್ಯೋಡಿ ಗುತ್ತು, ರಮೇಶ್ ನಾಯಕ್ ರಾಯಿ, ರಾಮಚಂದ್ರ ಶೆಟ್ಟಿಗಾರ್ ಅಣ್ಣಲಿಕೆ, ಗೋಪಾಲ್ ಬಂಗೇರ ಉಳಿರೋಡಿ ಮಾತನಾಡಿದರು.
ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಕೂತ್ಲೋಡಿ, ,ಕೋಶಾಧಿಕಾರಿ ದಾಮೋದರ್ ಪಿ ದೋಟ, ಮಹಿಳಾ ಅಧ್ಯಕ್ಷೆ ಶಕುಂತಲ ಆಚಾರ್ಯ, ಕಾರ್ಯದರ್ಶಿ, ಹೇಮಾ ಶೆಟ್ಟಿಗಾರ್ , ಬಾಬು ಶೆಟ್ಟಿ , ಗುಮ್ಮಣ್ಣ ನಾಯ್ಕ
ಹಾಗೂ ಎಲ್ಲಾ ಸಂಚಾಲಕರು ಪದಾಧಿಕಾರಿಗಳು ಸದಸ್ಯರು ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಹಲವು ವಿಚಾರಗಳನ್ನ ಚರ್ಚಿಸಿ ಈ ವರ್ಷದ ಕಾರ್ಯಕ್ರಮವನ್ನ ಹಿಂದಿಗಿಂತಲೂ ಸುಂದರ ಹಾಗೂ ಅಚ್ಚು ಕಟ್ಟಾಗಿ ನಡೆಸಲು ತೀರ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮೀಳಾ ಲೋಕೇಶ್ ಪ್ರಾರ್ಥನೆ ಮಾಡಿದರು ದಿನೇಶ ಶೆಟ್ಟಿಗಾರ್ ಸ್ವಾಗತಿಸಿ, ದಾಮೋದರ್ ಪಿ ದೋಟ ಧನ್ಯವಾದವಿತ್ತರು. ಕುಮಾರಿ. ಲಿಖಿತ ನಾರ್ಲೊಟ್ಟು ಕಾರ್ಯಕ್ರಮ ನಿರೂಪಿಸಿದರು.