ಮಂಗಳೂರು: ಕೇರಳ ಸರ್ಕಾರಿ ಸಾರಿಗೆ ಬಸ್‌ಗೆ ಕಾರು ಡಿಕ್ಕಿಯಾದ ಪರಿಣಾಮ ಕಾರು ಚಾಲಕನಿಗೆ ಗಾಯವಾದ ಘಟನೆ ಬೀರಿ ಜಂಕ್ಷನ್ ಬಳಿಯ ಕೋಟೆಕಾರಿನ ಬೀರಿ ಎಂಬಲ್ಲಿ ಜೂನ್ 30 ರಂದು ನಡೆದಿದೆ.

ಕಾಸರಗೋಡಿನಿಂದ ಮಂಗಳೂರಿಗೆ ಬರುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್, ಬೀರಿ ಜಂಕ್ಷನ್ ಬಳಿ ಪ್ರಯಾಣಿಕರನ್ನು ಇಳಿಸಲು ನಿಧಾನಗೊಳಿಸಿದ್ದ ವೇಳೆ, ಹಿಂದೆ ಬರುತ್ತಿದ್ದ ಕಾರು ನಿಗದಿತ ಸಮಯದಲ್ಲಿ ನಿಲ್ಲಲಾಗದೆ ಬಸ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ಪರಿಣಾಮ ಎರಡೂ ವಾಹನಗಳಿಗೆ ಹಾನಿಯುಂಟಾಗಿದೆ. ಬಸ್‌ನ ಹಿಂಭಾಗ ಮತ್ತು ಕಾರಿನ ಮುಂಭಾಗ ತೀವ್ರವಾಗಿ ಜಖಂಗೊಂಡಿವೆ.

ಅಪಘಾತದ ಪರಿಣಾಮವಾಗಿ ಕಾರು ಚಾಲಕ ಗಾಯಗೊಂಡಿದ್ದು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಕೆಲ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಜಂಕ್ಷನ್‌ನಲ್ಲಿ ಸಂಚಾರ ನಿಯಂತ್ರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

