ಪುತ್ತೂರು: ಬಿಜೆಪಿ ಮುಖಂಡರೊಬ್ಬರ ಪುತ್ರನ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು ಸಂತ್ರಸ್ಧ ಯುವತಿ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಈ ಬೆನ್ನಲ್ಲೆ ಆರೋಪಿ ಕೃಷ್ಣ ರಾವ್ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಸಂತ್ರಸ್ತೆಯ ತಾಯಿ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರಕರಣದ ಹಲವು ವಿಚಾರಗಳನ್ನು ಬಯಲು ಮಾಡಿದ್ದಾರೆ. ಮಗುವಿನ ಮುಖ ಸೇಮ್ ಅವನಂತೆಯೇ ಇದೆ. ಹುಡುಗನ ತಂದೆ ಡಿಎನ್ಎ ಟೆಸ್ಟ್ ಬೇಡ ಎಂದು ಹೇಳಿದರು. ನಾನು ಆಗಲೇಬೇಕು ಅಂತಾ ಹೇಳಿದ್ದೇನೆ. ಎಫ್ಐಆರ್ ಬೇಡ, ಇದು ಹುಡುಗನ ಭವಿಷ್ಯದ ಪ್ರಶ್ನೆ ಅಂತಾ ಅಶೋಕ್ ರೈ ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಕರಣ ಸಂಬಂಧ ಅರುಣ್ ಕುಮಾರ್ ಪುತ್ತಿಲ ಅವರು ಕೂಡ ಪ್ರತಿಕ್ರಿಯೆ ನೀಡಿ ಈ ವಿಷಯದ ಮಧ್ಯೆ ನಾನು ಬಂದರೆ ತಪ್ಪಾಗುತ್ತದೆ ಎಂದು ಹೇಳಿದ್ದಾರೆ. ಹಿಂದೂ ಮುಖಂಡರೊಬ್ಬರು 10 ಲಕ್ಷ ಕೊಡುತ್ತೇನೆ ಎಂದು ಹೇಳಿದ್ದಾರೆ. ಕೋಟಿ ಕೊಟ್ಟರೂ ನನಗೆ ಬೇಡ ಎಂದೇ ಹೇಳಿದ್ದಾನೆ ಎಂದು ಸಂತ್ರಸ್ತೆಯ ತಾಯಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


