Breaking
22 Mar 2026, Sun

ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆ, ಪೊಲೀಸರ ದಾಳಿ; ಓರ್ವನ ಬಂಧನ, ಇನ್ನೋರ್ವ ಪರಾರಿ

ಕುಂದಾಪುರ : ಅಕ್ರಮ ಮರಳು ದಂಧೆ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ನಡೆದಿದೆ.

ಇಲ್ಲಿನ ವಡೇರಹೋಬಳಿ ಗ್ರಾಮದ ನಾನಾ ಸಾಹೇಬ್ ರಸ್ತೆಯ ಕೊನೆಯಲ್ಲಿ ರಿಂಗ್ ರೋಡ್ ಸಮೀಪ ಪಂಚಗಂಗಾವಳಿ ಹೊಳೆಯಲ್ಲಿ ಕೆಲವು ಮಂದಿ ಹೊಳೆಯಿಂದ ಮರಳು ತೆಗೆದು ದೋಣಿಗೆ ತುಂಬಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆ ಈ ದಾಳಿಯನ್ನು ನಡೆಸಲಾಗಿತ್ತು.

ಈ ಸಂದರ್ಭ ಆರೋಪಿ ಉದಯ ಮೆಂಡನ್ ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು ಇನ್ನೋರ್ವ ವ್ಯಕ್ತಿ ಸುನಿಲ್ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ದಾಳಿ ವೇಳೆ ಮರಳುಗಾರಿಕೆಗೆ ಬಳಸುತ್ತಿದ್ದ ಬಳಸಿದ್ದ ಫೈಬರ್ ದೋಣಿ-1, 1 ½ ಳಿ ಯುನಿಟ್ ಮರಳು, ಟಿಪ್ಪರ್ ವಾಹನ ಹಾಗೂ ಕಬ್ಬಿಣದ ಹಾರೆ-1, ಫೈಬರ ಬುಟ್ಟಿಗಳು-2 ನ್ನು ವಶಪಡಿಸಿಕೊಳ್ಳಲಾಗಿದೆ.

ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ನಂಜಾನಾಯ್ಕ್ ನೇತೃತ್ವದಲ್ಲಿ ಈ ದಾಳಿಯನ್ನು ನಡೆಸಲಾಗಿತ್ತು.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *