ಮಂಗಳೂರು: ನಗರದ ಸರ್ಕ್ಯೂಟ್ ಹೌಸನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಥಳೀಯ ಮುಖಂಡರೊಬ್ಬರ ಮೇಲೆ ಗರಂ ಆದ ಘಟನೆ ಇಂದು ನಡೆದಿದೆ.

ದಿನೇಶ್ ಗುಂಡೂರಾವ್ ಅವರು ಪ್ರಚೋದನಕಾರಿ ಭಾಷಣಗಳ ಕುರಿತು ಮಾತನಾಡುತ್ತಿದ್ದರು.ಈ ವೇಳೆ ಮುಸ್ಲಿಂ ಮುಖಂಡರೊಬ್ಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿ “ಮೊನ್ನೆ ನಡೆದ ಕೊಲೆಯು ಪ್ರಚೋದನಕಾರಿ ಭಾಷಣದಿಂದಲೇ ಆಗಿದೆ” ಎಂದು ನೇರವಾಗಿ ಆರೋಪಿಸಿ ಗದ್ದಲ ಉಂಟು ಮಾಡಿದ್ದಾರೆ.

ಇದರಿಂದ ಕೋಪಗೊಂಡ ಸಚಿವರು ಏಯ್, ಯಾರು ಅವನು? ಮೊದಲು ಅವನನ್ನು ಹೊರಗೆ ಹಾಕ್ರಿ” ಎಂದು ಗಟ್ಟಿದನಿಯಲ್ಲಿ ಕೂಗಾಡಿದರು.ತಕ್ಷಣವೇ ಅಲ್ಲಿದ್ದ ತಮ್ಮ ಸಿಬ್ಬಂದಿಗೆ ಆ ಮುಖಂಡನನ್ನು ಸಭಾಂಗಣದಿಂದ ಹೊರಕ್ಕೆ ಕಳುಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಘಟನೆಯಿಂದ ಸುದ್ದಿಗೋಷ್ಠಿಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
