ಮಂಗಳೂರು: ಬಂಟ್ವಾಳ ಅಬ್ದುಲ್ ರಹಿಮಾನ್ ಹತ್ಯೆಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಬಂಟ್ವಾಳ ಮೂಲದ ದೀಪಕ್, ಪೃಥ್ವಿರಾಜ್ ಹಾಗೂ ಚೇತನ್ ಎಂಬವರನ್ನು ಬಂಧಿಸಿದ್ದಾರೆ ಅನ್ನುವ ಮಾಹಿತಿ ಇದೆ.
ಎರಡು ತಿಂಗಳ ಹಿಂದಿನ ಕೊಳ್ತಮಜಲು ಮಸೀದಿ ಸಮೀಪದ ಅಮಾಯಕ ಹಿಂದೂ ಯುವಕರ ಮೇಲೆ ನಡೆದ ಹಲ್ಲೆಗೆ ಪ್ರತೀಕಾರ ಎಂಬ ವಿಚಾರಗಳು ವೈರಲ್ ಆಗುತ್ತಿದೆ.ಜೊತೆಗೆ ಹಲ್ಲೆಯ ಪ್ರಮುಖ ಸೂತ್ರಧಾರಿ ಅಬ್ದುಲ್ ರಹಿಮಾನ್ ಅನ್ನುವ ಮಾಹಿತಿ ಇದ್ದು 2 ತಿಂಗಳಿಂದ ಕೊಲೆಗೆ ಸಂಚು ರೂಪಿಸಲಾಗಿತ್ತು ಅನ್ನುವ ಅಂತೆ -ಕಂತೆಗಳ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮೇ.27 ರಂದು ನಡೆದ ಈ ಕೊಲೆ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ 15 ಮಂದಿ ಭಾಗಿಯಾಗಿದ್ದಾರೆ ಎಂದು ನಿಸಾರ್ ಎಂಬವರು ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು.
